ವಿದ್ಯಾರ್ಥಿಗಳು ವೈಚಾರಿಕ ಪ್ರಜ್ಞೆ ಮೈಗೂಡಿಸಿಕೊಳ್ಳಿ:ವಕೀಲ ಟಿ.ಬಸವರಾಜ್ ಕಿವಿಮಾತು

ವಿದ್ಯಾರ್ಥಿಗಳು ವೈಚಾರಿಕ ಪ್ರಜ್ಞೆ ಮೈಗೂಡಿಸಿಕೊಳ್ಳಿ:ವಕೀಲ ಟಿ.ಬಸವರಾಜ್ ಕಿವಿಮಾತು

ಜಗಳೂರು ಸುದ್ದಿ:ವಿದ್ಯಾರ್ಥಿಗಳು ವೈಚಾರಿಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಹಾಗೂ ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್ ಕಿವಿಮಾತು ಹೇಳಿದರು.

ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಶ್ರೀ ತಿರುಮಲೇಶ್ವರ ಪ್ರೌಢಶಾಲೆಯಲ್ಲಿ ಮಾನವ ಬಂಧುತ್ವವೇದಿಕೆ ಸಂಸ್ಥಾಪಕ,ಲೋಕೋಪಯೋಗಿ ಇಲಾಖೆಯ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಹಾಗೂ ಮಾನವ ಬಂಧುತ್ವ ವೇದಿಕೆ ರಾಜ್ಯ‌ ಮುಖಂಡ ಕೆ.ಪಿ.ಪಾಲಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಪೆನ್ ವಿತರಿಸಿ ಅವರು ಮಾತನಾಡಿದರು.

ಮೌಢ್ಯತೆ,ಅಂಧಕಾರಗಳನ್ನು ಹೋಗಲಾಡಿಸಲು ಶಿಕ್ಷಣ ಅಗತ್ಯವಿದೆ.ವಿದ್ಯಾರ್ಥಿಗಳು ಪಠ್ಯ ವಿಷಯಕ್ಕೆ ಸೀಮಿತವಾಗದೆ.ಸಾಮಾಜಿಕ ಚಿಂತನೆ,ತಾರ್ಕಿಕ ತಳಹದಿಯ ಮೇಲೆ ಅಭ್ಯಾಸ ನಡೆಸಬೇಕಿದೆ.ಶಿಕ್ಷಣಕ್ಕೆ ಬಡತನ ಶಾಪವಲ್ಲ ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಂಡು ಉನ್ನತ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂದರ್ಭದಲ್ಲಿ  ನಾಯಕ ಸಮಾಜದ ತಾಲೂಕು ಕಾರ್ಯದರ್ಶಿ ವಕೀಲ ಸಿಎಂ ಹೊಳೆ ತಿಪ್ಪೇಸ್ವಾಮಿ,ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಧನ್ಯಕುಮಾರ್, ತಾಲೂಕು ಸಮಿತಿ ಮುಖಂಡರಾದ ಮರೇನಹಳ್ಳಿ ನಜೀರ್ ಅಹಮ್ಮದ್, ವಕೀಲರಾದ ಬಿಳಿಚೋಡು ಕರಿಬಸಪ್ಪ, ಸಣ್ಣ ಓಬಯ್ಯ, ತಿಪ್ಪೇಸ್ವಾಮಿ, ಬಸವರಾಜ್,ನಾಗೇಶ್ ಯುವ ಮುಖಂಡ ಓಬಳೇಶ್ ಮುಖ್ಯ ಶಿಕ್ಷಕ ಯಶವಂತ್ ನಾಯ್ಕ್ , ಸೇರಿದಂತೆ ಶಿಕ್ಷಕರು ವಿಧ್ಯಾರ್ಥಿಗಳು ಇದ್ದರು.