ವಿದ್ಯುತ್ ಸ್ಪರ್ಶಸಿ ರೈತ ಸಾವು

ವಿದ್ಯುತ್ ಸ್ಪರ್ಶಸಿ ರೈತ ಸಾವು

ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ವಿದ್ಯುತ್ ಸ್ಪರ್ಶಸಿ ರೈತ ಸಾವನಪ್ಪಿರುವ ಘಟನೆ ಬೆಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಸಿ ರೈತ ಸಾವನಪ್ಪಿದ್ದ ಸ್ಥಳಕ್ಕೆ ಇನ್ಸ್ಪೆಕ್ಟರ್ ರೇವತಿ ಪರಿಶೀಲನೆ ನಡೆಸಿದರು.
ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದ ಸರ್ವೇ ನಂಬರ್ 288 ರ ಜಮೀನಿನಲ್ಲಿ ಕೆಲಸ ಮಾಡುತಿದ್ದ ಸಂದರ್ಭದಲ್ಲಿ ಸಿಂಗನಹಳ್ಳಿ ಗ್ರಾಮದ ಶಿವೇಗೌಡ (60) ವಿದ್ಯುತ್ ತಂತಿ ತುಂಡಾಗಿ ಬಿದ್ದುದ್ದನ್ನು ತುಳಿದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ವಿದ್ಯುತ್ ಇಲಾಖೆಯಿಂದ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕಿಕ್ಕೇರಿ ಇನ್ಸ್ಪೆಕ್ಟರ್ ರೇವತಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಗ್ರಾಂ. ಪಂ. ಅಧ್ಯಕ್ಷ ಕುಬೇರ, ಸದಸ್ಯ ಬೆಡದಹಳ್ಳಿ ಸುನಿಲ್,ಕಾಂತರಾಜು, ಸೇರಿ ರೈತರು ಇದ್ದರು.