ಶಾಲೆಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ-ಅಧ್ಯಕ್ಷ ನವೀನ್

ಬಾಗೇಪಲ್ಲಿ: ಕಸಬಾ ಹೋಬಳಿ ಘಂಟಂವಾರಿಪಲ್ಲಿಯಲ್ಲಿ ಗ್ರಾಮ ಪಂಚಾಯತಿ ಆವರಣದಲ್ಲಿ ಅದ್ಯಕ್ಷ ಹೆಚ್.ಎಸ್. ನವೀನ್ ಅವರ ನೇತೃತ್ವದಲ್ಲಿ ವಿವಿಧ ಶಾಲಾ ವಿಧ್ಯಾರ್ಥಿಗಳು ತಮ್ಮ ಶಾಲೆಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಅಧಿಕಾರಿಗಳ ಗಮನ ಸೆಳೆದರು.ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಪ್ರಾಥಮಿಕ,3 ಹಿರಿಯ ಪ್ರಾಥಮಿಕ, ಹಾಗೂ1 ಪ್ರೌಢಶಾಲೆ ಒಟ್ಟು 13 ಶಾಲೆಗಳಿಂದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮಸ್ಯೆಗಳನ್ನು ಮುಕ್ತವಾಗಿ ಅದ್ಯಕ್ಷರು,ಪಿ.ಡಿ.ಓ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗಮನ. ಸೆಳೆದು ಸಮಸ್ಯೆಗಳ ಪರಿಹಾರವನ್ನು ಕಂಡುಕೊಂಡರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಹೆಚ್.ಎಸ್.ನವೀನ್ ಮಾತನಾಡಿ‘ಪಂಚಾಯಿತಿಯೇ ಮಕ್ಕಳ ಬಳಿ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಶಾಲೆಯ ಆವರಣದಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಚರ್ಚಿಸಿದ್ದಾರೆ ವಿದ್ಯಾರ್ಥಿಗಳಿಂದ, ಶಾಲೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿಯನ್ನು ಪಡೆದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಧ್ಯವಾಗುವ ಕಾರ್ಯಗಳನ್ನು ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸುತ್ತೇವೆ. ಹಾಗೂ ಇನ್ನುಳಿದ ಕಾರ್ಯಗಳ ಬಗ್ಗೆ ಉನ್ನತ ಮಟ್ಟದ ಪ್ರಾಧಿಕಾರದೊಂದಿಗೆ ಅಂದರೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಡೆಯಿಂದಾಗಲಿ, ಜಿಲ್ಲಾ ಪಂಚಾಯಿತಿ ಕಡೆಯಿಂದಾಗಲಿ, ಸಮನ್ವಯ ಸಾಧಿಸಿ ಕುಂದು ಕೊರತೆಗಳನ್ನು ಬಗೆಹರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ನಾರಾಯಣ ಸ್ವಾಮಿ, ಸದಸ್ಯರಾದ ರವಣಮ್ಮ ,ನಾರಾಯಣ ಸ್ವಾಮಿ, ಮಂಜುನಾಥ, ವೆಂಕಟೇಶ್, ಶ್ರೀನಿವಾಸ್, ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ.ಜಿ. ಶಿಕ್ಷಕರಾದ ನಾರಾಯಣ ಸ್ವಾಮಿ, ಜಿ.ವಿ.ಚಂದ್ರಶೇಖರ, ರಾಮಚಂದ್ರಪ್ಪ ವೆಂಕಟೇಶ್, ಟಿ.ಬಿ.ವೆಂಕಟರವಣಪ್ಪ,ರಾಧಮ್ಮ,ವೈ.