ಶ್ರೀ ಕೃಷ್ಣದೇವರಾಯರವರ 555ನೇ ಜನ್ಮದಿನ ಪ್ರಯುಕ್ತ ಶೋಭ ಯಾತ್ರೆ

ಶ್ರೀ ಕೃಷ್ಣದೇವರಾಯರವರ 555ನೇ ಜನ್ಮದಿನ ಪ್ರಯುಕ್ತ ಶೋಭ ಯಾತ್ರೆ

ಕೆಜಿಎಫ್: ಕೆಜಿಎಫ್ ನಗರದ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕೃಷ್ಣದೇವರಾಯರವರ ಶೋಭಾ ಯಾತ್ರೆ ಪ್ರಯುಕ್ತ ರಥ ಯಾತ್ರೆ ಆಗಮಿಸಿದ್ದು. ಬಲಜ ಯುವಶಕ್ತಿ ಕೆಜಿಎಫ್ ಹಾಗೂ ಬಲಜ ಸಮುದಾಯದ ಮುಖಂಡರಿಂದ ಅದ್ದೂರಿಯಾಗಿ ಸ್ವಾಗತ ಕೋರಿ ಶ್ರೀ ಕೃಷ್ಣದೇವರಾಯ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಸ್ವಾಗತ ಕೋರಿದರು. ನಂತರ ಮುಖಂಡರಾದ ಪುರುಷೋತ್ತಮ್ ಮಾತನಾಡಿ. ಶ್ರೀಕೃಷ್ಣದೇವರಾಯ ರವರ 555ನೇ ಜಯಂತಿಯನ್ನು ಸರ್ಕಾರ ಇದೇ ತಿಂಗಳು 16ನೇ ತಾರೀಕು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಇದಕ್ಕೆ ನಮ್ಮ ಎಲ್ಲಾ ಬಲಜ ಸಮುದಾಯದವರು ಒಗ್ಗಟ್ಟಿನಿಂದ ನಮ್ಮ ಎಲ್ಲಾ ತಾಲೂಕುಗಳಲ್ಲಿ ಶ್ರೀ ಕೃಷ್ಣದೇವರಾಯ ರವರ ಶುಭ ಯಾತ್ರೆಗೆ ಸ್ವಾಗತ ಕೋರಿ 16ನೇ ತಾರೀಕು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ನಮ್ಮ ಬಲಿಜ ಸಮುದಾಯದವರು ಭಾಗವಹಿಸಬೇಕೆಂದು ಕೋರಿದರು. ಸಂದರ್ಭದಲ್ಲಿ ಮುಖಂಡರಗಲಾದ ಪ್ರಕಾಶ್ ನಾಯ್ಡು. ರಘು. ವಿಜಿ ಕುಮಾರ್. ನಾಗಭೂಷಣ್. ಯಶವಂತ .ಗುರು. ಲೋಕೇಶ್. ಗೌತಮ್. ಪುನೀತ್. ವಿಜಿ ಕುಮಾರ್. ಎಲ್. ರಮೇಶ್ .ಲಲಿತ್ ಮೊದಲಾದವರು ಇದ್ದರು.