ಶ್ರೀ ಕ್ಷೇತ್ರ ದಿಂದ ನಮ್ಮೂರು ನಮ್ಮ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ ಕ್ಷೇತ್ರ ದಿಂದ ನಮ್ಮೂರು ನಮ್ಮ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ

ಮಂಡ್ಯ: ಜಿಲ್ಲೆಯ ಭಾರತಿನಗರ ಯೋಜನಾ ಕಚೇರಿ ವ್ಯಾಪ್ತಿಯ ಗೌಡಗೆರೆ ಗ್ರಾಮದ ಕುಂಭ ಕೆರೆಯ ಗುದ್ದಲಿ ಪೂಜೆಯನ್ನು ಗೌರವಾನ್ವಿತ ಮೈಸೂರು ಜಿಲ್ಲಾ ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ಶ್ರೀ ಜಯರಾಮ ನೆಲ್ಲಿತ್ತಾಯ ರವರು ಗುದ್ದಲಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಅವರು ಮಾತನಾಡುತ್ತ ಪೂಜ್ಯರ ಆಶಯದಂತೆ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಯ ಮಣ್ಣು ಹೂಳೆತ್ತುವ ಮುಖಾಂತರ ಜೀವರಾಶಿಗಳಿಗೆ ಜೀವಿಸಲು ರೈತರಿಗೆ ಕೃಷಿ ಪೂರಕವಾಗಿ ದನ ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಭೂಮಿಯ ಅಂತರ್ಜಲ ಹೆಚ್ಚಿಸಲು ಕೆರೆ ಅಗತ್ಯವಾಗಿದೆ ಕೆರೆ ಊರಿನ ಆಸ್ತಿ  ಕೆರೆ ಚೆನ್ನಾಗಿದ್ದಲ್ಲಿ ಊರು ಸಂಪತ್ತು ಭರಿತವಾಗಿರುತ್ತದೆ ಯೋಜನೆಯ ಪ್ರಯೋಜನಪಡೆದುಕೊಳ್ಳಿ ಎಂದು ಮಾಹಿತಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ನಿರ್ದೇಶಕರಾದ ಎಂ.ಚೇತನಾ, ಮೈಸೂರು ಪ್ರಾದೇಶಿಕ ವಿಭಾಗದ ಕೆರೆಯ ಅಭಿಯಂತರರಾದ ಪುಷ್ಪರಾಜ್,ಭಾರತಿನಗರ ಯೋಜನಾ ಕಚೇರಿಯ ಯೋಜನಾಧಿಕಾರಿ ಶ್ರೀಮತಿ ಸುವರ್ಣ ಭಟ್, ಅವರು ಕೆರೆ ಸಮಿತಿಯ ಅಧ್ಯಕ್ಷರಾದ ಗುರುಮಲ್ಲಪ್ಪ, ಅವರು ಕೃಷಿ ಮೇಲ್ವಿಚಾರಕರು ಹನುಮಂತರಾಯ ವಲಯ ಮೇಲ್ವಿಚಾರಕರಾದ ಸುಮಾ, ಸೇವಾ ಪ್ರತಿನಿಧಿ ಶಿಲ್ಪ ರಾಣಿ  ಊರಿನ ಗಣ್ಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಂಘದ ಸದಸ್ಯರು ಭಾಗವಹಿಸಿದ್ದರು.