ಸರ್ಕಾರದಿಂದ ನಾಮ ನಿರ್ದೇಶನಗೊಂಡ ವಿವಿಧ ಸದಸ್ಯರಿಗೆ ಸನ್ಮಾನ 

ಸರ್ಕಾರದಿಂದ ನಾಮ ನಿರ್ದೇಶನಗೊಂಡ ವಿವಿಧ ಸದಸ್ಯರಿಗೆ ಸನ್ಮಾನ 
ಕೊಪ್ಪಳ, ನ 3, ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಕೊಪ್ಪಳದ ವಿವಿಧ ಗಣ್ಯರಿಗೆ ವಿವಿಧ ಸಮಿತಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಜನಪ್ರತಿನಿಧಿ ಸದಸ್ಯರಿಗೆ ಮಂಜುನಾಥ್, ಅರೆಕೇರಿ ಮತ್ತು ದಶರಥ ಅರಕೇರಿ ಸಹೋದರರು ಸೇರಿ ಅವರ ನಿವಾಸದಲ್ಲಿ ಕುಟುಂಬದ ಪರವಾಗಿ ಸನ್ಮಾನಿಸಿದರು, ಹಾಗೂ ನೂತನ ಸದಸ್ಯರಿಗೆ ಶುಭ ಕೋರಿ ನಿಮ್ಮ ಸೇವಾವಧಿಯಲ್ಲಿ ಸಾರ್ವಜನಿಕರಿಗೆ ಹೆಚ್ಚು ಹೆಚ್ಚು ಅನುಕೂಲ ದೊರೆಯಲ್ಲಿ ಸರ್ಕಾರದಿಂದ ಸಿಗಬಹುದಾದ ಸಹಾಯ, ಸೌಕರ್ಯಗಳನ್ನು, ಸೌಲಭ್ಯಗಳು, ಜನರಿಗೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಾವೆಲ್ಲರೂ ಶ್ರಮಿಸಲಿ ಎಂದು ಆಶಯ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿದರು.
ಈ  ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾದ ಬಾಶುಸಾಬ್ ಕತಿಬ್, ಕೊಪ್ಪಳ  ನೂತನವಾಗಿ ಆಶ್ರಯ ಕಮಿಟಿ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡ ದಲಿತ ಸಮುದಾಯದ ಯುವ ನಾಯಕ, ದಲಿತ ಪರ ಹೋರಾಟಗಾರ, ಶ್ರೀಯುತ ಪರಶುರಾಮ ಕೆರೆಹಳ್ಳಿ , ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ರಂಗಭೂಮಿ ಕಲಾವಿದ ಚಾಂದ್ ಪಾಷಾ ಖಿಲ್ಲೇದಾರ ಮತ್ತು ಕೇಂದ್ರ ಸರ್ಕಾರದ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸದಸ್ಯರಾದ ಮಾನ್ವಿ ಪಾಶಾ  ಅಲ್ಲದೆ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜಶೇಖರ್ ಅಡೂರ್ ಮತ್ತಿತರರಿಗೆ ಸನ್ಮಾನಿಸಲಾಯಿತು.