ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ನಮ್ಮ ರೈಟ್ ಟು ಲೀವ್ ಸಮಸ್ಥೆ ಸದಾ ಸಿದ್ದ-ನಿರ್ವಾಹಕ ವಿರೇಶ್ 

ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ನಮ್ಮ ರೈಟ್ ಟು ಲೀವ್ ಸಮಸ್ಥೆ ಸದಾ ಸಿದ್ದ-ನಿರ್ವಾಹಕ ವಿರೇಶ್ 

ಬಾಗೇಪಲ್ಲಿ: ಗಡಿ ಭಾಗದ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಮಾಡುವ ಮೂಲಕ ಆದರ್ಶ ಶಾಲೆ ಆದರ್ಶ ಗ್ರಾಮವಾನ್ನಾಗಿ ಮಾಡುವುದೇ ನಮ್ಮ ರೈಟ್ ಟು ಲೀವ್ ಸಮಸ್ಥೆಯ ಮುಖ್ಯಉದ್ದೇಶವಾಗಿದೆ ಎಂದು ನಿರ್ವಾಹಕ ವಿರೇಶ್ ತಿಳಿಸಿದ್ದಾರೆ.

ತಾಲ್ಲೂಕಿನ ಮರಗನಕುಂಟೆ ಗ್ರಾಮ ಸರ್ವಾಥಾಮುಖ ಅಭಿರುದ್ಧಿಯ ಅಡಿಯಲ್ಲಿ ಮರಗನಕುoಟೆ ಗ್ರಾಮದ ಸರ್ಕಾರಿ ಪ್ರಾರ್ಥಮಿಕ ಶಾಲೆಯ ನವೀಕರಣ ಮಾಡುವ ಉದ್ದೇಶದಿಂದ ಅಟ್ಕಿನ್ಸ್ ರಿಯಾಲಿಸ್ ಸಮಸ್ಥೆಯ ಸಹಕಾರದಿಂದ ರೈಟ್ ಟು ಲಿವ್ ಸಂಸ್ಥೆ ಸಹಯೋಗದಲ್ಲಿ ಇಂದು ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ನವೀಕರಣ, ಕೊಟ್ಟದಿಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳ, ನಿರ್ಮಾಣ,ಹದೆಗೆಟ್ಟ ರಸ್ತೆಗಳ ದುರಸ್ಥಿ ಕಾಮಗಾರಿಗಳು ಮಾಡುವ ಮೂಲಕ ಗ್ರಾಮೀಣ ಬಾಗಗಳಲ್ಲಿನ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡುವುದೇ ನಮ್ಮ ಗುರಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ಮಾತನಾಡಿ ಈ ಭಾಗದ ಸರ್ಕಾರಿ ಶಾಲೆಗಳಿಗೆ ಸುಮಾರು ವರ್ಷಗಳಿಂದ ಸತತವಾಗಿ ನಮ್ಮ ಬಾಗೇಪಲ್ಲಿ ತಾಲೂಕಿನದ್ಯಾoತ ರೈಟ್ ಟು ಲೀವ್ ಸಮಸ್ಥೆ ಸಹಕಾರದಿಂದ ಸರ್ಕಾರಿ ಶಾಲೆಗಳಲ್ಲಿ ಸೌಚಲಯಗಳ ನಿರ್ಮಾಣ,ಸ್ಮಾರ್ಟ್ ಕ್ಲಾಸ್,ಟ್ಯಾಬ್, ಶುದ್ಧ ಕುಡಿಯುವ, ನೀರಿನ ಘಟಕಗಳ ನಿರ್ಮಾಣ, ಸಮವಸ್ತ್ರ, ಕಟ್ಟಡ ನಿರ್ಮಾಣ, ನವಿಕರಣ ಸೇರಿದಂತೆ ಅನೇಕ ಶೈಕ್ಷಣಿಕ ಸೇವೆಗಳು ಮಾಡುವ ಮುಖಾಂತರ ಬಡ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ ನಮ್ಮ ಇಲಾಖೆ ವತಿಯಿಂದ ರೈಟ್ ಟು ಲೀವ್ ಪೌoಡೇಷನ್ ಹಾಗೂ ರವರಿಗೆ ಅಭಿನಂದನೆಗಳು ತಿಳಿಸುತ್ತೇವೆ ಎಂದರು.

ಈ ಸಂಧರ್ಭದಲ್ಲಿ ಅಟ್ಕಿನ್ಸ್ ರಿಯಾಲಿಸ್ ನಿರ್ವಾಹಕ ಚರಣ್,ಶಿಕ್ಷಣ ಸಂಯೋಜಕ ವೆಂಕಟರಾಮಪ್ಪ, ಶಾಲಾ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಾಕಿರ್,ರೈಟ್ ಟು ಲಿವ್ ಮ್ಯಾನೇಜರ್ ವೀರೇಶ್, ಹರೀಶ್, ಗ್ರಾಮ ಪಂಚಾಯಿತಿ ಸದಸ್ಯ ಅಂಜಿನಪ್ಪ, ಬಾಬಾಜಾನ್, ಹುಸೇನ್ ಸೇರಿದಂತೆ ಇತರರು ಇದ್ದರು...