ಸರ್ ಎಂ.ವಿಶ್ವೇಶ್ವರಯ್ಯರವರ ಮಾತು

ಸರ್ ಎಂ.ವಿಶ್ವೇಶ್ವರಯ್ಯರವರ ಮಾತು

ಸರ್ ಎಂ.ವಿಶ್ವೇಶ್ವರಯ್ಯನವರು ಗಾಂಧೀಜಿಯವರನ್ನು ಭೇಟಿಯಾಗಲು ಹೋದರು. ಅವರು ಅವರಿಗೆ ನೀಡಿದ ಕುರ್ಚಿಯ ಮೇಲೆ ಕುಳಿತರು. ಗಾಂಧೀಜಿ ನಕ್ಕರು. ಸರ್.ಎಂ.ವಿಶ್ವೇಶ್ವರಯ್ಯನವರು ಗಾಂಧೀಜಿಯವರನ್ನು ಯಾಕೆ ನಕ್ಕಿದ್ದೆಂದು ಕೇಳಿದರು. ಗಾಂಧೀಜಿ ಹೀಗೆಂದು ಉತ್ತರಿಸಿದರು-ನೀವು ಚಿನ್ನದ ಕೈಯನ್ನು ಹೊಂದಿರುವಂತಹ ಬೆತ್ತದ ಜೊತೆಗೆ ಸೂಟ್‌ನ್ನು ಧರಿಸಿದ್ದೀರಿ ಮತ್ತು ನಿಮ್ಮ ಜೇಬಿನಲ್ಲಿ ಚಿನ್ನದ ಗಡಿಯಾರವಿದೆ. ಆದ್ದರಿಂದ ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು. ನಾನು ಈ ದೇಶದ ಬಡವರಂತೆ ಇದ್ದೇನೆ, ಧರಿಸಲು ಒಂದೇ ಬಟ್ಟೆಯಿರುತ್ತದೆ ಮತ್ತು ಕುಳಿತುಕೊಳ್ಳಲು ಕುರ್ಚಿಯಿಲ್ಲ.
ಅದಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರು ಹೀಗೆಂದು ಉತ್ತರಿಸಿದರು. ಮಹಾತ್ಮರೇ, ನಾನು ಒಬ್ಬ ಬಡ ದೇವಸ್ಥಾನದ ಅರ್ಚಕನ ಮಗನಾಗಿದ್ದೇನೆ, ಅವರಿಗೆ ಎರಡು ಹೊತ್ತಿನ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಆಂಗ್ಲರು ಕುದುರೆಗಳು ಎಳೆಯುವ ಗಾಡಿಯಲ್ಲಿ ಸವಾರಿ ಮಾಡುವುದನ್ನು ನಾನು ನೋಡಿದೆ. ಎಲ್ಲಾ ಜನರು ಅವರನ್ನು ಭಯದಿಂದ ನೋಡುತ್ತಿದ್ದರು. ನಾನು ಅವರಿಗಿಂತ ಉತ್ತಮವಾಗಿ ಕೆಲಸ ಮಾಡಬೇಕೆಂದು ನಿರ್ಧರಿಸಿದೆನು. ಹಾಗಾಗಿ ನಾನು ಕಷ್ಟಪಟ್ಟು ಅಧ್ಯಯನ ಮಾಡಿ ಈ ಸ್ಥಾನವನ್ನು ಗಳಿಸಿದೆನು. ಭವಿಷ್ಯದಲ್ಲಿ ನಮ್ಮ ದೇಶದವರೆಲ್ಲರೂ ನಿಮ್ಮಂತೆ ಯೋಚಿಸಿದರೆ ನಾವು ನೆಲದ ಮೇಲೆ ಕುಳಿತುಕೊಳ್ಳುತ್ತೇವೆ ಮತ್ತು ಇತರರು ನಮ್ಮನ್ನು ಆಳುತ್ತಾರೆ.