ಹಳೆಯ ಸಂಸತ್ ಭವನದ ಮುಂದಿನ ಪುತ್ಥಳಿ ಸ್ಥಳಾಂತರ ಖಂಡಿಸಿ:ಬೃಹತ್ ಪ್ರತಿಭಟನೆ

ಹಳೆಯ ಸಂಸತ್ ಭವನದ ಮುಂದಿನ ಪುತ್ಥಳಿ ಸ್ಥಳಾಂತರ ಖಂಡಿಸಿ:ಬೃಹತ್ ಪ್ರತಿಭಟನೆ

ವಿಜಯಪುರ:ಭಾರತದ ಐತಿಹಾಸಿಕ ನವದೆಹಲಿಯ ಹಳೆಯ ಸಂಸತ್ ಭವನದ ಮುಂದಿನ ರಾಷ್ಟ್ರೀಯ ನಾಯಕರಾದ ಛತ್ರಪತಿ ಶಿವಾಜಿ ಮಹಾರಾಜರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗಳನ್ನು ಕೇಂದ್ರ ಸರ್ಕಾರ ಸ್ಥಳಾಂತರಿಸಿರುವ ಮೂಲಕ ರಾಷ್ಟ್ರ ನಾಯಕರಿಗೆ ಅಗೌರವ ತೋರಿದೆ. ಇದು ವಿಶ್ವದಲ್ಲಿರುವ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿಗೆ ಘಾಸ್ಸಿಯನ್ನುಂಟು ಮಾಡಿದೆ.

ಈ ಘಟನೆ ಚರಿತ್ರೆಯ ಪುಟದಲ್ಲಿ ಕಪ್ಪು ಚುಕ್ಕೆಯಾಗಿದೆ. ದೇಶಾದ್ಯಂತ ರಾಷ್ಟ್ರ ನಾಯಕರ ಪುತ್ಥಳಿಗಳ ಸ್ಥಳಾಂತರ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದ್ದರು ಕೂಡಾ ಕೇಂದ್ರ ಸರ್ಕಾರ ಪುನಃ ಪ್ರತಿಮೆಗಳನ್ನು ಮೂಲ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸುತ್ತಿಲ್ಲ.

ಕಾರಣ ರಾಷ್ಟ್ರದ ಮಹಾನ್ ನಾಯಕರಿಗೆ ಆದ ಅವಮಾನವನ್ನು ಖಂಡಿಸಿ ನಮ್ಮ ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆ, ವಿಜಯಪುರ ವತಿಯಿಂದ ಜುಲೈ 10-2024 ರಂದು ಬೆಳಿಗ್ಗೆ 9 ಘಂಟೆಗೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ವಿಜಯಪುರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಪುನಃ ಸಂಸತ್ತಿನ ಮುಂಭಾಗದ ಮೂಲ ಸ್ಥಳದಲ್ಲಿ ಪ್ರತಿಷ್ಠಾಪಿಸಿ ರಾಷ್ಟ್ರ ನಾಯಕರಿಗೆ ಗೌರವಿಸಲು ಆಗ್ರಹಿಸಲಾಗುವುದು. ಕಾರಣ ದೇಶ ಭಕ್ತ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು

ತುಳಸಿರಾಮ ಹರಿಜನ ಅಧ್ಯಕ್ಷರು ಬುದ್ಧ, ಬಸವ ಅಂಬೇಡ್ಕರ್ ಸೇವಾ ಸಂಸ್ಥೆ (ರಿ)ವಿಜಯಪುರ ಪ್ರಕಟಣೆ ತಿಳಿಸಿದ್ದಾರೆ.