ಹೋರಿಯನ್ನು ಬರೋಬ್ಬರಿ 5 ಲಕ್ಷಕ್ಕೆ ಮಾರಾಟ ಮಾಡಿದ ರೈತ ಪರಂಧಾಮ್ ಗೌಡ 

ಹೋರಿಯನ್ನು ಬರೋಬ್ಬರಿ 5 ಲಕ್ಷಕ್ಕೆ ಮಾರಾಟ ಮಾಡಿದ ರೈತ ಪರಂಧಾಮ್ ಗೌಡ 

ಬೇತಮಂಗಲ: ಒಂದು ವರ್ಷದ ಹಿಂದೆ ಹೋರಿಗಳನ್ನು ಖರೀದಿ ಮಾಡಿ ಒಂದು ಹೋರಿಯನ್ನು ಬರೋಬ್ಬರಿ 5 ಲಕ್ಷಕ್ಕೆ ಮಾರಾಟ ಮಾಡುವ ಮೂಲಕ ಗ್ರಾಮಾಂತರ ಭಾಗದಲ್ಲಿ ಯುವ ರೈತ ಪರಂಧಾಮ್ ಗೌಡ ರೈತರಿಗೆ ಮಾದರಿಯಾಗಿದ್ದಾರೆ.

ಕಂಗಂಡ್ಲಾಹಳ್ಳಿ ಗ್ರಾಪಂ ಯ ಮೊತಕಪಲ್ಲಿ ಗ್ರಾಮದ ಯುವ ರೈತ ಪರಂಧಾಮ್ ಗೌಡ ಒಂದು ವರ್ಷ ಹಿಂದೆ 36 ಸಾವಿರ ರೂಗಳಿಗೆ ಖರೀದಿ ಮಾಡಿ ಹೋರಿಗಳನ್ನು ಒಂದು ಹೋರಿಯನ್ನು ತಮಿಳುನಾಡಿನ ರೈತರೋಬ್ಬರಿಗೆ 5 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
 
ಯುವರೈತ ಪರಂಧಾಮ್ ಗೌಡ ಮಾತನಾಡಿ. ಈ ಹೋರಿಗಳು ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರಖ್ಯಾತಿ ಪಡೆದಿರುವ ಜಲ್ಲಿಕಟ್ಟು ಹಬ್ಬದ ಪಂದ್ಯದಲ್ಲಿ ಸ್ಪರ್ದಿಸಿ ಪ್ರಥಮ ಪಂದ್ಯದಲ್ಲಿ 50 ಸಾವಿರ ನಗದು ಮತ್ತು ದ್ವಿತೀಯ ಪಂದ್ಯದಲ್ಲಿ 20 ಗ್ರಾಂ ಚಿನ್ನವನ್ನು ಜಯಗಳಿಸಿವೆ ಎಂದು ತಿಳಿಸಿದರು. 2 ವರ್ಷಗಳ ಹಿಂದೆಯೂ ಸಹ ಜೋಡೆತ್ತು ಹೋರಿಗಳನ್ನು ಸುಮಾರು 3 ಲಕ್ಷಕ್ಕೆ ಮಾರಲಾಗಿತ್ತು. ಜಾನುವಾರು ಸಾಗಾಣಿಕೆ ಮತ್ತು ಕೃಷಿ ಚಟುವಟಿಕೆ ಮಾಡಲು ನಮ್ಮ ಕುಟುಂಬ ಸಹಕಾರವು ಹೆಚ್ಚು ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ತೊಂಗುಲು ಕುಪ್ಪ ಸುಧಾಕರ್ ರೆಡ್ಡಿ. ಶಂಕರ್.ತ್ಯಾಗರಾಜ್ ನಾಯ್ಡು. ಶಿವಪ್ಪ. ಗೋವಿಂದಪ್ಪ. ರಮೇಶ್. ಸುಬ್ರಮಣಿ ಹಾಗೂ ಉಪಸ್ಥಿತರಿದ್ದರು.