75ನೇ ಧ್ವಜಾರೋಹಣ ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ 

75ನೇ ಧ್ವಜಾರೋಹಣ ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ 

75ನೇ ಧ್ವಜಾರೋಹಣ ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ 

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ 75ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದರು. ತಾಲೂಕಿನ ಯರೇಹಂಚಿನಾಳ ಗ್ರಾಮದ ಸಾರ್ವಜನಿಕರ ಗ್ರಂಥಾಲಯ ಕಚೇರಿಯಲ್ಲಿ 75ನೇ ಗಣರಾಜ್ಯೋತ್ಸವವನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರಿಂದ ಈ ಧ್ವಜಾರೋಹಣ ನೆರವೇರಿಸಲಾಯಿತು. ಗ್ರಂಥ ಪಾಲಕರಾದ ಬೀಮಪ್ಪ ಪೂಜಾರ ಈ ಕಾರ್ಯದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಈ ವೇಳೆಯಲ್ಲಿ ಆಗಸ್ಟ್ 15, 1947 ರಲ್ಲಿ ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, ಜನವರಿ 26, 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ. ಎಂದು ಪ್ರತಿ ವರ್ಷ ಜನವರಿ 26 ರಂದು ಈ ಗಣರಾಜ್ಯೋತ್ಸವನ್ನು ದೇಶಾದ್ಯಂತ ಪ್ರತಿಯೊಂದು ಹಳ್ಳಿಯಲ್ಲೂ ಆಚರಣೆ ಮಾಡಲಾಗುತ್ತದೆ. ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಕೋಳೂರ ಮಾತನಾಡಿದರು. ಈ ಸಂದರ್ಭದಲ್ಲಿ. ರೈತ ಸಂಘದ ಪದಾಧಿಕಾರಿಗಳಾದ ಗ್ರಾಮ ಘಟಕ ಅಧ್ಯಕ್ಷ ಬಸಪ್ಪ ಕಮತರ.ಅಣ್ಣಪ್ಪ ನರೇಗಲ್, ವಿರೇಶ ಗುಡಿಮ್ಮಿ, ಶರಣಪ್ಪ ಗುಡಮ್ಮಿ, ಬಸನಗೌಡ ಯಲ್ಲಪ್ಪಗೌಡ್ರು, ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಕೋಳೂರ, ಮತ್ತು ಗ್ರಾಮದ ಗುರು ಹಿರಿಯರು ಮುಖಂಡರು, ಶಾಲೆ ಶಿಕ್ಷಕರ ಸಿಬ್ಬಂದಿಗಳು ಶಾಲಾ ಮಕ್ಕಳು ಇತರರು ಉಪಸ್ಥಿತರಿದ್ದರು.