ಕರಂಬಳ್ಳಿಯಲ್ಲಿ ಮಧ್ವ ಜಯಂತಿ
(ಸುದ್ದಿಕಿರಣ ವರದಿ)
ಉಡುಪಿ: ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಮಧ್ವ ಜಯಂತಿ ಆಚರಣೆ ಸ್ಥಳೀಯ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ನಡೆಯಿತು.
ಶ್ರೀ ಹರಿವಾಯು ಸ್ತುತಿ, ದ್ವಾದಶಸ್ತೋತ್ರ ಪಾರಾಯಣ, ಮಹಿಳೆಯರಿಂದ ಮಧ್ವನಾಮ ಕೀರ್ತನೆ ನಡೆದ ನಂತರ ಮಧ್ವರ ಭಾವಚಿತ್ರಕ್ಕೆ ಸಾಲುದೀಪ ಮತ್ತು ಮಂಗಳಾರತಿ ಬೆಳಗಲಾಯಿತು.
ಲೋಕ ಕ್ಷೇಮಕ್ಕಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು