Tuesday, May 17, 2022
Home ಅಧ್ಯಾತ್ಮ ಕೃಷ್ಣಮಠದಲ್ಲಿ ನಾಗಮಂಡಲ ಸಂಪನ್ನ

ಕೃಷ್ಣಮಠದಲ್ಲಿ ನಾಗಮಂಡಲ ಸಂಪನ್ನ

ಕೃಷ್ಣಮಠದಲ್ಲಿ ನಾಗಮಂಡಲ ಸಂಪನ್ನ

ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶುಕ್ರವಾರ ಶ್ರೀ ವಾದಿರಾಜ ಆಚಾರ್ಯ ಪ್ರತಿಷ್ಠಾಪಿತ ತಕ್ಷಕ ಬಿಲದ ಸನ್ನಿಧಿಯ ಮುಂಭಾಗದಲ್ಲಿ ಸಂಪ್ರದಾಯದಂತೆ ದ್ವೈವಾರ್ಷಿಕವಾಗಿ ನಡೆಯುವ ನಾಗಮಂಡಲ ನಡೆಯಿತು.

ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ತತ್ಕರಕಮಲ ಸಂಜಾತರಾದ ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಹಾಲಿಟ್ಟು ಸೇವೆ ನಡೆಯಿತು.

ಸಾಂಪ್ರದಾಯಿಕ ಶೈಲಿ
ವಿದ್ಯುದ್ದೀಪ ಇಲ್ಲದೆ ಅನಿಲದೀಪ (ಗ್ಯಾಸ್ ಲೈಟ್)ವನ್ನು ಉಪಯೋಗಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ನಾಗಮಂಡಲೋತ್ಸವ ನಡೆಯಿತು.

ನಾಗಕನ್ನಿಕೆಗೆ ನೈಸರ್ಗಿಕ ಬಣ್ಣ ಬಳಸಿದ ಉಡುಪಿ ಕೈಮಗ್ಗದ ಸೀರೆ ಧರಿಸಿ ನರ್ತಿಸಿದ ಮಂಡಲ ಸೇವೆ ಇದಾಗಿತ್ತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!