Wednesday, August 10, 2022
Home ಅಧ್ಯಾತ್ಮ ಕೃಷ್ಣಮಠದಲ್ಲಿ ಬಲೀಂದ್ರ ಪೂಜೆ ಸಂಪನ್ನ

ಕೃಷ್ಣಮಠದಲ್ಲಿ ಬಲೀಂದ್ರ ಪೂಜೆ ಸಂಪನ್ನ

ಕೃಷ್ಣಮಠದಲ್ಲಿ ಬಲೀಂದ್ರ ಪೂಜೆ ಸಂಪನ್ನ

ಉಡುಪಿ, ನ. 4 (ಸುದ್ದಿಕಿರಣ ವರದಿ): ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಬಲೀಂದ್ರ ಪೂಜೆ ಸಂಪನ್ನಗೊಂಡಿತು.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತ ಮುದರಂಗಡಿ ಲಕ್ಷ್ಮೀಶ ಆಚಾರ್ಯ ಬಲೀಂದ್ರ ಪೂಜೆ ನಡೆಸಿದರು.

ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಬಳಿಕ ಪಂಚ ದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಶ್ರೀಕೃಷ್ಣ ಮಠದ ಎಲ್ಲಾ ವಿಭಾಗಗಳು ಮತ್ತು ಪರ್ಯಾಯ ಅದಮಾರು ಮಠಕ್ಕೆ ದೀಪ ಪ್ರದರ್ಶಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!