Thursday, July 7, 2022
Home ಅಧ್ಯಾತ್ಮ ಪಂಚ ದುರ್ಗಾ ನಮಸ್ಕಾರ ಪೂಜೆ ಸಂಪನ್ನ

ಪಂಚ ದುರ್ಗಾ ನಮಸ್ಕಾರ ಪೂಜೆ ಸಂಪನ್ನ

ಪಂಚ ದುರ್ಗಾ ನಮಸ್ಕಾರ ಪೂಜೆ ಸಂಪನ್ನ
(ಸುದ್ದಿಕಿರಣ ವರದಿ)

ಉಡುಪಿ: ಇಲ್ಲಿನ ಕಾರಣಿಕ ಕ್ಷೇತ್ರವಾದ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಭಾದ್ರಪದ ಹುಣ್ಣಿಮೆ ಪರ್ವಕಾಲದಲ್ಲಿ ಸೋಮವಾರ ಪಂಚ ದುರ್ಗಾ ನಮಸ್ಕಾರ ಪೂಜೆ ನೆರವೇರಿತು.

ಪಂಚ ದುರ್ಗೆಯರನ್ನು ಪ್ರತ್ಯೇಕ ಪ್ರತ್ಯೇಕವಾಗಿ 5 ಮಂಡಲಗಳಲ್ಲಿ ಆವಾಹಿಸಿ, ನಡೆಸುವ ವಿಶೇಷ ಪೂಜೆ ಪಂಚ ದುರ್ಗಾ ನಮಸ್ಕಾರ ಪೂಜೆ.

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ಕೃಷ್ಣಮೂರ್ತಿ ತಂತ್ರಿ ಪೌರೋಹಿತ್ಯದಲ್ಲಿ ಹೈದರಾಬಾದ್ ಉದ್ಯಮಿ ನವೀನ್ ಆಚಾರ್ಯ ಹಾಗೂ ಕುಟುಂಬಸ್ಥರ ಸೇವಾರೂಪವಾಗಿ ನಡೆಸಲಾಯಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!