ಪಶ್ಚಿಮ ಜಾಗರ ಪೂಜೆ ಸಂಪನ್ನ
ಉಡುಪಿ, ನ. 16 (ಸುದ್ದಿಕಿರಣ ವರದಿ): ಕಾರ್ತೀಕ ಶುದ್ಧ ದ್ವಾದಶಿಯಂದು ಭಗವಂತ ನಿದ್ರೆಯಿಂದ ಎದ್ದೇಳುತ್ತಾನೆ ಎಂಬ ಪ್ರತೀತಿ ಇದ್ದು, ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಅಶ್ವಯುಜ ಮಾಸದ ಶುಕ್ಲ ಏಕಾದಶಿಯಿಂದ ಆರಂಭಗೊಂಡ ಪಶ್ಚಿಮ ಜಾಗರ ಪೂಜೆ, ಕಾರ್ತೀಕ ಮಾಸದ ಶುಕ್ಲ ಏಕಾದಶಿ ವರೆಗೆ ನಡೆದು, ಮಂಗಳವಾರ ಸಂಪನ್ನಗೊಂಡಿತು.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪೂಜೆ ನೆರವೇರಿಸಿದರು.