Monday, August 15, 2022
Home ಅಧ್ಯಾತ್ಮ ಎಳ್ಳಮಾವಾಸ್ಯೆ: ಯತಿಗಳಿಂದ ಸಮುದ್ರ ಸ್ನಾನ

ಎಳ್ಳಮಾವಾಸ್ಯೆ: ಯತಿಗಳಿಂದ ಸಮುದ್ರ ಸ್ನಾನ

ಸುದ್ದಿಕಿರಣ ವರದಿ
ಭಾನುವಾರ, ಜನವರಿ 2, 2022
ಎಳ್ಳಮಾವಾಸ್ಯೆ: ಯತಿಗಳಿಂದ ಸಮುದ್ರ ಸ್ನಾನ

ಉಡುಪಿ: ಎಳ್ಳಮಾವಾಸ್ಯೆ ಅಂಗವಾಗಿ ಭಾನುವಾರ ಕಟಪಾಡಿ ಸಮೀಪದ ಮಟ್ಟು ಕಡಲ ಕಿನಾರೆಯಲ್ಲಿ ಉಡುಪಿ ಅಷ್ಟಮಠಗಳ ಯತಿಗಳು ಸಮುದ್ರ ಸ್ನಾನ ಮಾಡಿದರು. ಅವರೊಂದಿಗೆ ಸ್ಥಳೀಯ ಭಕ್ತರೂ ಪಾಲ್ಗೊಂಡರು.

ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸಂಕಲ್ಪಪೂರ್ವಕ ಸಮುದ್ರ ಸ್ನಾನ ಮಾಡಿ ದಂಡೋದಕ ಹಾಗೂ ತರ್ಪಣ ನೀಡಿದರು.

ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿ ಪ್ರವೀಣ ತಂತ್ರಿ, ಮಾಜಿ ಮೊಕ್ತೇಸರ ಮಟ್ಟು ಲಕ್ಷ್ಮೀನಾರಾಯಣ ರಾವ್, ದೇವಳದ ಅರ್ಚಕ ಶ್ರೀಕಾಂತ ಅಚಾರ್ಯ ಹಾಗೂ ಸ್ಥಳೀಯರಾದ ಚಂದಪ್ಪ ಕೋಟ್ಯಾನ್ ಮೊದಲಾದ ಊರಿನ ಗಣ್ಯರು ಶ್ರೀಪಾದರನ್ನು ಸ್ವಾಗತಿಸಿ, ಫಲಪುಷ್ಪದೊಂದಿಗೆ ಮಟ್ಟು ಗುಳ್ಳ ನೀಡಿದರು.

ಸ್ಥಳೀಯ ಭಕ್ತರ ಕೋರಿಕೆಯ ಮೇರೆಗೆ ಶ್ರೀಪಾದರು ದೋಣಿಯಲ್ಲಿ ಸಮುದ್ರ ವಿಹಾರ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್, ಕೋಟೆ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ ಕುಮಾರ್ ಮಟ್ಟು, ಕೋಟೆ ಪಂಚಾಯತ್ ಸದಸ್ಯ ನಾಗರಾಜ್ ಮಟ್ಟು, ರಮೇಶ್ ಪೂಜಾರಿ, ಪ್ರೇಮ ಕುಂದರ್, ರತ್ನಾಕರ್, ಹಿರಿಯರಾದ ಸದಾರಾಮ ಮೆಂಡನ್, ಕೇಶವ ಸುವರ್ಣ ಮಟ್ಟು, ಹರ್ಷ ಮಟ್ಟು, ಕರಾವಳಿ- ಮಟ್ಟು ವ್ಯಾಪ್ತಿಯ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!