Saturday, August 13, 2022
Home ಅಧ್ಯಾತ್ಮ ವಿಶ್ವೇಶತೀರ್ಥರ ದ್ವಿತೀಯಾರಾಧನೆ ಸಂಪನ್ನ

ವಿಶ್ವೇಶತೀರ್ಥರ ದ್ವಿತೀಯಾರಾಧನೆ ಸಂಪನ್ನ

ಸುದ್ದಿಕಿರಣ ವರದಿ
ಬುಧವಾರ, ಜನವರಿ 5, 2022

ವಿಶ್ವೇಶತೀರ್ಥರ ದ್ವಿತೀಯಾರಾಧನೆ ಸಂಪನ್ನ
ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೆ ಮಹೋತ್ಸವವನ್ನು ಇಲ್ಲಿನ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲೂ ಬುಧವಾರ ಆಚರಿಸಲಾಯಿತು.

ಆ ಪ್ರಯುಕ್ತ ಕಾರ್ಕಳ ಹಂಡೆ ದಾಸ ಪ್ರತಿಷ್ಠಾನ ಆಯೋಜನೆಯಲ್ಲಿ ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಭಜನೆ ನಡೆಯಿತು. ಹಂಡೆ ದಾಸ ಪ್ರತಿಷ್ಠಾನದ ಸದಸ್ಯರು, ರಾಜರಾಜೇಶ್ವರ ಭಜನಾ ಮಂಡಳಿಯ ಮಹಿಳೆಯರು ಮತ್ತು ಮಕ್ಕಳು, ಕೂಟ ಮಹಾ ಜಗತ್ತು ಉಡುಪಿ, ಗಿರಿ ಬಳಗ ಕುಂಜಾರುಗಿರಿ, ಶ್ರೀ ವೆಂಕಟರಮಣ ಸ್ತೋತ್ರ ಭಜನಾ ಮಂಡಳಿ ಕರಂಬಳ್ಳಿ ಸದಸ್ಯರು ಪಾಲ್ಗೊಂಡಿದ್ದರು.

ಶ್ರೀಮಠದಲ್ಲಿ ವಿಶೇಷ ಪೂಜೆ ನಡೆದು, ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಮಠದ ದಿವಾನ ಎಂ. ರಘುರಾಮಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪಕ ಇಂದುಶೇಖರ ಹೆಗಡೆ, ಎಸ್. ವಿ. ಭಟ್, ರಾಮಚಂದ್ರ ಉಪಾಧ್ಯಾಯ, ಕೊಟ್ಟಾರಿ ಸಂತೋಷ್ ಮೊದಲಾದವರು ಸಹಕರಿಸಿದರು.

ಹಂಡೆದಾಸ ಪ್ರತಿಷ್ಠಾನ ವತಿಯಿಂದ ಉದಯಾಸ್ತಮಾನ ಭಜನೆ ನಡೆಯಿತು.

ಕುಕ್ಕಿಕಟ್ಟೆಯಲ್ಲಿರುವ ಪೇಜಾವರ ಮಠದ ಅಧೀನದ ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ ನಡೆಯಿತು. ಆಶ್ರಮದ ಮಕ್ಕಳು ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಂಗಳಾರತಿ ಬೆಳಗಿ ವಿವಿಧ ಸ್ತೋತ್ರ ಹಾಗೂ ಭಗವದ್ಗೀತೆಯನ್ನು ಸಾಮೂಹಿಕವಾಗಿ ಪಠಿಸಿ ಭಕ್ತಿ ಗೌರವ ಸಮರ್ಪಿಸಿದರು.

ಮಠದ ದಿವಾನ ಎಂ. ರಘುರಾಮಾಚಾರ್ಯ, ಬಾಲನಿಕೇತನದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವ್ಯವಸ್ಥಾಪಕರು ಇದ್ದರು.

ಶ್ರೀಮಠದ ಅಧೀನ ಸಂಸ್ಥೆ ಉಡುಪಿ ವಿದ್ಯೋದಯ ಶಾಲೆ ಮತ್ತು ಕಾಲೇಜಿನಲ್ಲಿ ಶ್ರೀಪಾದರ ಸಂಸ್ಮರಣೆ ಮತ್ತು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರಾದ ನಾಗರಾಜ ಬಲ್ಲಾಳ್, ಕೆ. ಗಣೇಶ್ ರಾವ್, ಪದ್ಮರಾಜ್ ಹಾಗೂ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕ ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!