Wednesday, August 10, 2022
Home ಅಧ್ಯಾತ್ಮ ದೊಂಡೇರಂಗಡಿ: ಶ್ರೀರಾಮ ದೇವರಿಗೆ ಸಹಸ್ರಾರು ಲಡ್ಡು ಸಮರ್ಪಣೆ

ದೊಂಡೇರಂಗಡಿ: ಶ್ರೀರಾಮ ದೇವರಿಗೆ ಸಹಸ್ರಾರು ಲಡ್ಡು ಸಮರ್ಪಣೆ

ಸುದ್ದಿಕಿರಣ ವರದಿ
ಮಂಗಳವಾರ, ಫೆಬ್ರವರಿ 15

ದೊಂಡೇರಂಗಡಿ: ಶ್ರೀರಾಮ ದೇವರಿಗೆ ಸಹಸ್ರಾರು ಲಡ್ಡು ಸಮರ್ಪಣೆ
ಹಿರಿಯಡಕ: ಇಲ್ಲಿಗೆ ಸಮೀಪದ ಹರಿಖಂಡಿಗೆ ಬಳಿಯ ದೊಂಡೇರಂಗಡಿ ಶ್ರೀರಾಮ ಮಂದಿರದ 33ನೇ ಪುನರ್ ಪ್ರತಿಷ್ಠಾ ವರ್ಧಂತಿ ಹಾಗು 128ನೇ ಭಜನಾ ಮಂಗಲೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ವಿಶೇಷ ಹರಕೆಯಾದ ಲಡ್ಡು ಸಮರ್ಪಣೆ ನಡೆಯಿತು.

ತಮ್ಮ ಅಭೀಷ್ಟ ಸಿದ್ಧಿಗಾಗಿ ನೂರಾರು ಭಕ್ತರು ಸಹಸ್ರಾರು ಲಡ್ಡುಗಳನ್ನು ಶ್ರೀದೇವರಿಗೆ ಸಮರ್ಪಿಸಿದರು.

ಏಕಾಹ ಭಜನೆ
ಊರು ಪರವೂರುಗಳ ವಿವಿಧ ಸಂತ ಮಂಡಳಿಗಳಿಂದ ಅಹೋರಾತ್ರಿ ಭಜನೆ ನಡೆಸಲಾಯಿತು. ರಾತ್ರಿ ರಂಗಪೂಜೆ, ದೀಪಾರಾಧನೆ ನಡೆಯಿತು.

ಭಜನಾ ಮಂಗಲೋತ್ಸವ ಅಂಗವಾಗಿ ಶ್ರೀರಾಮ ದೇವರಿಗೆ ವಿಶೇಷ ಹೂವಿನ ಅಲಂಕಾರ, ನೂರಾರು ಭಕ್ತರು ಸಂತಾನ ಭಾಗ್ಯ, ವಿವಾಹ, ಗೃಹ ನಿರ್ಮಾಣ, ಕಷ್ಟ ನಷ್ಟ ಪರಿಹಾರಕ್ಕಾಗಿ ದೇವರಿಗೆ ಹರಕೆ ಹೇಳಿಕೊಂಡು, ತಮ್ಮ ಅಭೀಷ್ಟ ಈಡೇರಿದ ಹಿನ್ನೆಲೆಯಲ್ಲಿ ನೂರಾರು ಭಕ್ತರಿಂದ ಸಾವಿರಾರು ಲಾಡುಗಳನ್ನು ಶ್ರೀರಾಮ ದೇವರಿಗೆ ಅರ್ಪಿಸಿದರು.

ಮಧ್ಯಾಹ್ನ ಮಹಾಪೂಜೆ ಬಳಿಕ ಭೋಜನ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ಲಾಡು ವಿತರಿಸಲಾಯಿತು.

ದೇವಳದ ಪ್ರಧಾನ ಅರ್ಚಕ ಕಾಶಿನಾಥ ಭಟ್ ಕಲ್ಯಾಣಪುರ ಧಾರ್ಮಿಕ ಪೂಜಾ ವಿಧಾನ ನಡೆಸಿಕೊಟ್ಟರು. ಶ್ರೀರಾಮ ಮಂದಿರ ಅಧ್ಯಕ್ಷ ಜಯರಾಮ ನಾಯಕ್, ಮಹೇಶ ಭಟ್, ರಾಘವೇಂದ್ರ ಕಿಣಿ, ಗಣೇಶ ಶೆಣೈ, ಸಂದೀಪ ಶೆಣೈ, ಜಿಎಸ್.ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!