ಹೊಸ ವರ್ಷದ ಸಂಕಲ್ಪ: ಗೀತಾ ಸುಗೀತಾ ಕರ್ತವ್ಯಾ
ಭಗವದ್ಗೀತೆ ಸದಾನಂದ ನಾದ ಶ್ರೀಕೃಷ್ಣನ ಸಂದೇಶ. ಶ್ರೀಮದ್ಭಗವದ್ಗೀತೆಯನ್ನು ಸಂಪೂರ್ಣವಾಗಿ ಬರೆಯುವ ಹೊಸ ವರ್ಷದ ಸತ್ಯಸಂಕಲ್ಪ ನಿಮ್ಮದಾಗಲಿ. ನಮ್ಮೆಲ್ಲ ನಿರೀಕ್ಷೆ ಪರೀಕ್ಷೆ ಸವಾಲು, ಕವಲುಗಳಿಗೆಲ್ಲ ಉತ್ತರ ಈ ಲೇಖನ ಯಜ್ಞದಲ್ಲಿದೆ.
ನಮ್ಮ ಚತುರ್ಥ ಪರ್ಯಾಯ ನಿಮಿತ್ತ ನಾವು ಈಗ ಹೊಸ ವರ್ಷದಲ್ಲಿ ಘೋಷಿಸುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಪವಿತ್ರ ಕಾರ್ಯದಲ್ಲಿ ಭಾಗವಹಿಸೋಣ.
ಯಜ್ಞಾವತಿ ಪರ್ಜನ್ಯ ಯಜನದಿಂದ ಸುವೃಷ್ಟಿ ಎಂಬ ಗೀತಾ ವಾಕ್ಯವನ್ನು ಸಾಕ್ಷಾತ್ಕರಿಸೋಣ.
ಯೋಗಕ್ಷೇಮಮ್ ವಹಾಮ್ಯಹಂ ಎಂಬ ಗೀತಾಚಾರ್ಯನ ಅಮರ ಸಂದೇಶವನ್ನು ನಾವೇಕೆ ಸ್ವೀಕರಿಸಬಾರದು?
ಗೀತಾ ಸುಗೀತಾ ಕರ್ತವ್ಯಾ– ಇದುವೇ 2022ರ ಘೋಷವಾಕ್ಯ, ಧೈಯವಾಕ್ಯ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ