Wednesday, August 10, 2022
Home ಅಧ್ಯಾತ್ಮ ದೇವಕೀ ಕೃಷ್ಣ ರವಳನಾಥ ಸನ್ನಿಧಿಯಲ್ಲಿ ಚಂಡಿಕಾ ಹವನ ಸಂಪನ್ನ

ದೇವಕೀ ಕೃಷ್ಣ ರವಳನಾಥ ಸನ್ನಿಧಿಯಲ್ಲಿ ಚಂಡಿಕಾ ಹವನ ಸಂಪನ್ನ

ದೇವಕೀ ಕೃಷ್ಣ ರವಳನಾಥ ಸನ್ನಿಧಿಯಲ್ಲಿ ಚಂಡಿಕಾ ಹವನ ಸಂಪನ್ನ
(ಸುದ್ದಿಕಿರಣ ವರದಿ)

ಕಾರ್ಕಳ: ಇಲ್ಲಿನ ತೆಳ್ಳಾರು ರಸ್ತೆಯಲ್ಲಿರುವ ಶ್ರೀ ದೇವಕೀ ಕೃಷ್ಣ ರವಳನಾಥ ಸನ್ನಿಧಿಯಲ್ಲಿ ಚಂಡಿಕಾ ಹವನ ನಡೆಯಿತು.

ಕಾರ್ಯಕ್ರಮದಂಗವಾಗಿ ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪಂಚಾಮೃತಾಭಿಷೇಕ, ಸಾನಿಧ್ಯ ಹವನ, ದ್ವಾದಶ ಲಶಾಭಿಷೇಕ ನಡೆಸಲಾಯಿತು.

ವೇ|ಮೂ| ಸಂದೀಪ ಭಟ್ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆದಿದ್ದು, ಹೋಮ ಪೂಜಾ ಕಾರ್ಯದಲ್ಲಿ ಕಂಬದಕೋಣೆ ನಾರಾಯಣ ಕಾಮತ್ ದಂಪತಿ ಸಹಕರಿಸಿದರು.

ಹೋಮ ಪೂರ್ಣಾಹುತಿ ಬಳಿಕ ಕುಮಾರಿಕಾ ಪೂಜನ, ಸುಹಾಸಿನೀ ಪೂಜೆ, ಮಹಾಪೂಜೆ ಬಳಿಕ ಸಮಾರಾಧನೆ ನಡೆಯಿತು.

ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸುಧಾಕರ ಪ್ರಭು, ಖಜಾಂಚಿ ಗಣೇಶ್ ಕಾಮತ್, ಕಾರ್ಯದರ್ಶಿ ವಸಂತ ಪ್ರಭು, ರಾಮರಾಯ ಪ್ರಭು, ದೇವದಾಸ್ ಕಾಮತ್ ಉಡುಪಿ, ವಿನೋ ಪ್ರಭು, ಆರ್.ಎಸ್.ಬಿ. ಯುವಕ ಮಂಡಳಿ ಸದಸ್ಯರು, ಕಾಮತ್ ಕುಟುಂಬಿಕರು, ಸಮಾಜ ಬಾಂಧವರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!