Saturday, August 13, 2022
Home ಅಧ್ಯಾತ್ಮ ಅರಬ್ ರಾಷ್ಟ್ರಗಳಲ್ಲಿ ರಾಘವೇಂದ್ರ ಆರಾಧನೆಗೆ ಸಿದ್ಧತೆ

ಅರಬ್ ರಾಷ್ಟ್ರಗಳಲ್ಲಿ ರಾಘವೇಂದ್ರ ಆರಾಧನೆಗೆ ಸಿದ್ಧತೆ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಅರಬ್ ರಾಷ್ಟ್ರಗಳಲ್ಲಿ ರಾಘವೇಂದ್ರ ಆರಾಧನೆಗೆ ಸಿದ್ಧತೆ
ಯುಎಇ: ಜಾತಿ, ದೇಶ, ಭಾಷೆ ವ್ಯಾಪ್ತಿಗೆ ನಿಲುದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆಯನ್ನು ಮೊತ್ತ ಮೊದಲ ಬಾರಿಗೆ ಅರಬ್ ರಾಷ್ಟ್ರಗಳಲ್ಲಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಯತಿಶ್ರೇಷ್ಠರೆಂದೇ ಪರಿಚಿತರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವ ಆಗಸ್ಟ್ 14ರಂದು ಅಜ್ಮಾನ್ ಇಂಡಿಯನ್ ಅಸೋಸಿಯೇಶನ್ ನಲ್ಲಿ ಶ್ರದ್ಧಾಭಕ್ತಿಯಿಂದ ಉತ್ತರಾರಾಧನೆ ನೆಡಸಲಾಗುವುದು ಎಂದು ಸಂಘಟಕ ವಿಜಯ ಜಿ. ತಿಳಿಸಿದ್ದಾರೆ.

ಶ್ರೀಮಠದ ವತಿಯಿಂದ ದತ್ತಾತ್ತೇಯ ಜೋಶಿ ಹಾಗೂ ತಂಡದವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವರು. ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವದ ವಿಶೇಷತೆ ಹಾಗೂ ಸನಾತನ ಧರ್ಮದ ವಿಚಾರಗಳ ಬಗ್ಗೆ ಶತಾವಧಾನಿ ಡಾ| ಆರ್, ಗಣೇಶ್ ಶಿಷ್ಯರಾದ ಅರ್ಜುನ ಭಾರದ್ವಾಜ್ ತಿಳಿಸುವರು.

ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ವಿಜಯ್, ಸದನ್ ದಾಸ್ ಹಾಗೂ ಮಧು ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!