ಸುದ್ದಿಕಿರಣ ವರದಿ
ಗುರುವಾರ, ಮೇ 12
ಮೇ 16-17: ದೊಡ್ಡಣಗುಡ್ಡೆ ಪ್ರತಿಷ್ಠಾ ವರ್ಧಂತಿ
ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 16ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಈ ತಿಂಗಳ 15ರಿಂದ 17ರ ವರೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.ಮೇ 14ರ ಸಂಜೆ 6ರಿಂದ ಋತ್ವಿಜರ ಆಗಮನ ದೇವತಾ ಪ್ರಾರ್ಥನೆ ತೋರಣ ಮುಹೂರ್ತ ಉಗ್ರಾಣ ಮುಹೂರ್ತ ವಾಸ್ತು ರಾಕ್ಷೋಘ್ನ ಪ್ರಕ್ರಿಯೆ ಅಧಿವಾಸ ಪ್ರಕ್ರಿಯೆ ಹಾಗೂ ಮೇ 16ರಂದು ಪುಣ್ಯಾಹ ವಾಚನ ಆದ್ಯ ಗಣಯಾಗ ಸಪರಿವಾರ ದೇವರ ಪ್ರಧಾನ ಹೋಮ ಕಲಶಾಭಿಷೇಕ ಬೆಳಿಗ್ಗೆ 9.32ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀದುರ್ಗಾ ಆದಿಶಕ್ತಿ ದೇವಿಗೆ ಪಂಚ ವಿಂಶತಿ ದ್ರವ್ಯಮಿಳಿತ ಅಷ್ಟೋತ್ತರ ಶತ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಅಂದು ಸಂಜೆ 7ರಿಂದ ಆರಾಧನಾ ರಂಗಪೂಜಾ ಮಹೋತ್ಸವ ಬಲಿ, ಉತ್ಸವ ಪಲ್ಲಕ್ಕಿ, ಉತ್ಸವ, ವಸಂತ ಪೂಜೆ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮೇ 17ರ ಬೆಳಿಗ್ಗೆ ಗಂಟೆ 8ರಿಂದ ಶ್ರೀ ಮಹಾಚಂಡಿಕಾ ಯಾಗ, ಬ್ರಾಹ್ಮಣ ಸುವಾಸಿನಿ ಆರಾಧನೆ, ಆಚಾರ್ಯ ದಂಪತಿ, ಕನ್ನಿಕಾರಾಧನೆ ಕುಮಾರ ಪೂಜೆ, ಮಹಾ ಸಂಪ್ರೋಕ್ಷಣೆ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ಸಂಜೆ ಗಂಟೆ ಪ್ರತಿದಿನ ಸಂಜೆ 5ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ.
ನೃತ್ಯ ಸೇವೆ ಹಾಗೂ ಸಂಗೀತ ಸೇವೆಯನ್ನು ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸಮರ್ಪಿಸುವ ಭಕ್ತಾದಿಗಳಿಗೆ ಹಾಗೂ 16ರಂದು ಶ್ರೀ ಚಕ್ರಪೀಠ ಸುರಪೂಜಿತೆ ಸನ್ನಿಧಾನದಲ್ಲಿ ವಿದ್ಯಾರಂಭ ಹಾಗೂ ತುಲಾಭಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.