ಉಡುಪಿ: ವಾರ್ಷಿಕ ರಥೋತ್ಸವ ಹಾಗೂ ರಾಶಿಪೂಜೆ ಮಹೋತ್ಸವ ಸಂಭ್ರಮದಲ್ಲಿರುವ ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣಸ್ವಾಮಿಗೆ ಗುರುವಾರ ಸಾನ್ನಿಧ್ಯ ಕಲಶಾಭಿಷೇಕ ನಡೆಯಿತು.
ಕ್ಷೇತ್ರದ ತಂತ್ರಿ ಪುತ್ತೂರು ಹಯವದನ ತಂತ್ರಿ ನೇತೃತ್ವದಲ್ಲಿ ಋತ್ವಿಜರಾದ ವೇ| ಮೂ| ಪಂಜ ಭಾಸ್ಕರ ಭಟ್, ಮಧುಸೂದನ ಭಟ್, ಪಾಡಿಗಾರು ಶ್ರೀನಿವಾಸ ತಂತ್ರಿ ಮತ್ತು ವಾದಿರಾಜ ತಂತ್ರಿ ಸಹಯೋಗದೊಂದಿಗೆ ಸಂಪನ್ನವಾಯಿತು.
ಶ್ರೀದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ರಾಜ ಎ. ಶೇರಿಗಾರ್, ಭಾಸ್ಕರ ಬಾಚನಬೈಲು, ಸುಧಾ ಎನ್. ಶೆಟ್ಟಿ, ಬಾಬ, ಲಕ್ಷ್ಮೀನಾರಾಯಣ ಭಟ್, ಶ್ಯಾಮಸುಂದರ ಭಟ್, ಉಮೇಶ್ ರಾವ್, ಸಂಧ್ಯಾ ಪ್ರಕಾಶ್, ಪೂರ್ಣಿಮಾ ಜನಾರ್ದನ್, ವಿಜಯಶ್ರೀ, ಸತೀಶ್ ಕೊಡವೂರು, ಬಾಲಕೃಷ್ಣ, ಕಾಂತಪ್ಪ ಕರ್ಕೇರ, ಶಿವಪ್ಪ ಟಿ. ಕಾಂಚನ್, ಹಿರಿಯಣ್ಣ, ಹರೀಶ್ ಕೋಟ್ಯಾನ್, ರಂಜಿತ್ ಕೊಡವೂರು, ಅರುಣ್ ಕುಮಾರ್, ಪ್ರವೀಣ್ ಕೊಡವೂರು ಮೊದಲಾದವರಿದ್ದರು