Wednesday, August 10, 2022
Home ಅಧ್ಯಾತ್ಮ ಸ್ವರ್ಣಾನದಿ ಸ್ನಾನದಲ್ಲಿ ನೂರಾರು ಮಂದಿ ಭಾಗಿ

ಸ್ವರ್ಣಾನದಿ ಸ್ನಾನದಲ್ಲಿ ನೂರಾರು ಮಂದಿ ಭಾಗಿ

ಸ್ವರ್ಣಾನದಿ ಸ್ನಾನದಲ್ಲಿ ನೂರಾರು ಮಂದಿ ಭಾಗಿ
(ಸುದ್ದಿಕಿರಣ ವರದಿ)

ಉಡುಪಿ: ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಕ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಮಂಗಳವಾರ ನೂರಾರು ಮಂದಿ ಪವಿತ್ರ ತೀರ್ಥಸ್ನಾನಗೈದರು.

ಕೃಷ್ಣಾಂಗಾರಕ ಚತುರ್ಥಿ ದಿನವಾದ ಇಂದು ಸ್ವರ್ಣಾ ನದಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆರತಿ ಬೆಳಗಿದರು.

ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರೂ ಮಂಗಳಸ್ನಪನದಲ್ಲಿ ಭಾಗಿಗಳಾದರು.

ಮಂಗಳವಾರ ಕೃಷ್ಣಾಂಗಾರಕ ಚತುರ್ಧಶಿ ಯೋಗವಿದ್ದು, ಸುವರಣಾ ನದಿಯಲ್ಲಿ ನೂರಾರು ಮಂದಿ ಪವಿತ್ರ ನದಿ ಸ್ನಾನ ಮಾಡಿದರು.

ಉಡುಪಿ ಮಾತ್ರವಲ್ಲದೇ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಆಂಧ್ರದ ಚಿತ್ತೂರು ಮೊದಲಾದೆಡೆಗಳಿಂದಲೂ ಅನೇಕ ಮಂದಿ ಭಕ್ತರು ಆಗಮಿಸಿದ್ದರು.

ಈ ತೀರ್ಥಸ್ನಾನದ ಮಹತ್ವ ಬಗ್ಗೆ ವಾದಿರಾಜ ಆಚಾರ್ಯರು ತೀರ್ಥಪ್ರಬಂಧ ಗ್ರಂಥದಲ್ಲಿ ಉಲ್ಲೇಖಸಿದ್ದಾರೆ ಎಂದು ಕಾರ್ಯಕ್ರಮ ರೂವಾರಿ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!