Monday, August 15, 2022
Home ಅಧ್ಯಾತ್ಮ ಮಲ್ಪೆ ರಾಮ ಮಂದಿರದಲ್ಲಿ ಲಕ್ಷ ತುಳಸಿ ಅರ್ಚನೆ

ಮಲ್ಪೆ ರಾಮ ಮಂದಿರದಲ್ಲಿ ಲಕ್ಷ ತುಳಸಿ ಅರ್ಚನೆ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 10

ಮಲ್ಪೆ ರಾಮ ಮಂದಿರದಲ್ಲಿ ಲಕ್ಷ ತುಳಸಿ ಅರ್ಚನೆ
ಮಲ್ಪೆ: ಇಲ್ಲಿನ ಜಿ.ಎಸ್.ಬಿ ಸಮಾಜದವರ ಶ್ರೀರಾಮ ಮಂದಿರದಲ್ಲಿ ಆಷಾಢ ಏಕಾದಶಿ ಅಂಗವಾಗಿ ಭಾನುವಾರ ಜಿ.ಎಸ್.ಬಿ ಯುವಕ ಮಂಡಳಿ ವತಿಯಿಂದ ಲಕ್ಷ ತುಳಸಿ ಅರ್ಚನೆ ನಡೆಸಲಾಯಿತು.

ಅರ್ಚಕರಾದ ವಿಘ್ನೇಶ ಭಟ್ ಮತ್ತು ಲಕ್ಷ್ಮಣ ಭಟ್ ಕಲ್ಯಾಣಪುರ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!