Tuesday, May 17, 2022
Home ಅಧ್ಯಾತ್ಮ ನಿತ್ಯಾನಂದ ಮಂದಿರ ಮಠ: 60ನೇ ವಾರ್ಷಿಕೋತ್ಸವ ಸಂಪನ್ನ

ನಿತ್ಯಾನಂದ ಮಂದಿರ ಮಠ: 60ನೇ ವಾರ್ಷಿಕೋತ್ಸವ ಸಂಪನ್ನ

ನಿತ್ಯಾನಂದ ಮಂದಿರ ಮಠ: 60ನೇ ವಾರ್ಷಿಕೋತ್ಸವ ಸಂಪನ್ನ

ಉಡುಪಿ, ನ. 25 (ಸುದ್ದಿಕಿರಣ ವರದಿ): ಇಲ್ಲಿನ ಕವಿ ಮುದ್ದಣ ಮಾರ್ಗದ ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ ಮಠದಲ್ಲಿ 60ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ, ಬಾಲಭೋಜನ, ಅನ್ನಸಂತರ್ಪಣೆ, ಪಲ್ಲಕಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಪುತ್ತೂರು ಶ್ರೀಹಯವದನ ತಂತ್ರಿ ಪೌರೋಹಿತ್ಯದಲ್ಲಿ ನಡೆಯಿತು.

ಆಡಳಿತ ಮಂಡಳಿ ಗೌರವಾಧ್ಯಕ್ಷ ಕಪ್ಪೆಟ್ಟು ಸೂರ್ಯಪ್ರಕಾಶ್ ನಂದಾದೀಪ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿ ಗೌರವಾಧ್ಯಕ್ಷ ಪಿ. ಪುರುಷೋತ್ತಮ ಶೆಟ್ಟಿ, ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ, ತೋಟದಮನೆ ಕೊಡವೂರು, ಅಧ್ಯಕ್ಷ ಎರ್ಮಾಳು ಶಶಿಧರ್ ಕೆ. ಶೆಟ್ಟಿ, ಉಪಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರ್, ಕಾರ್ಯದರ್ಶಿ ಯೋಗೀಶ್ ಶ್ಯಾನುಭೋಗ್ ಪಾಂಗಾಳ, ಕೋಶಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಬನ್ನಂಜೆ, ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಮಹಿಳಾ ಸದಸ್ಯರು, ಸದ್ಗುರು ಭಕ್ತವೃಂದ ಮೊದಲಾದವರಿದ್ದರು.

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಬನ್ನಂಜೆ, ಶ್ರೀ ನಿತ್ಯಾನಂದ ಮಂದಿರ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿ, ಶ್ರೀ ವಿಷ್ಣು ಭಜನಾ ಮಂಡಳಿ ಎರ್ಮಾಳ್, ಶ್ರೀ ಗೀತಾ ಭಜನಾ ಮಂಡಳಿ ಉಡುಪಿ, ಶ್ರೀ ವೀರವಿಠಲ ಭಜನಾ ಮಂಡಳಿ ಮಣಿಪಾಲ, ಮಾತೃ ಮಂಡಳಿ ಕಡಿಯಾಳಿ, ಮಹಾಲಸಾ ಭಜನಾ ಮಂಡಳಿ ತೋನ್ಸೆ, ಶ್ರೀ ನಿತ್ಯಾನಂದ ಭಜನಾ ಮಂದಿರ ಗಣೇಶಪುರ ಕಾಟಿಪಳ್ಳ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಮಲ್ಪೆ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!