ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 30
ಪಣಿಯಾಡಿ ಬ್ರಹ್ಮಕಲಶೋತ್ಸವ: ಸಿದ್ಧತೆ ಪೂರ್ಣ
ಉಡುಪಿ: ಮೇ 1ರಿಂದ 7ರ ವರೆಗೆ ನಡೆಯಲಿರುವ ಪಣಿಯಾಡಿ ಶ್ರೀಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಿದ್ಧತೆ ಪೂರ್ಣಗೊಂಡಿದೆ.
ತದಂಗವಾಗಿ ಪ್ರಪ್ರಥಮ ಮುಹೂರ್ತವಾದ ಚಪ್ಪರ ಮೂಹೂರ್ತ ವೇದಮೂರ್ತಿ ಶ್ರೀ ಹಯವದನ ತಂತ್ರಿ ನೇತೃತ್ವದಲ್ಲಿ ನಡೆಯಿತು.
ಅಮಂತ್ರಣ ಬಿಡುಗಡೆ
ಇದೇೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಿರಿಯಡ್ಕದ ಪುತ್ತಿಗೆ ಮೂಲಮಠದಲ್ಲಿ ಶ್ರೀದೇವರ ಮುಂಭಾಗದಲ್ಲಿ ಬಿಡುಗಡೆಗೊಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಎಂ. ನಾಗರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಎಸ್. ನಾರಾಯಣ ಮಡಿ, ಉಪಾಧ್ಯಕ್ಷ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯಾಯ, ವಿಠ್ಠಲಮೂರ್ತಿ ಆಚಾರ್ಯ, ಭಾರತಿ ಕೃಷ್ಣಮೂರ್ತಿ, ಸುಮಿತ್ರ ಕೆರೆಮಠ, ಶ್ರೀಧರ ಭಟ್ ಪಣಿಯಾಡಿ, ಕೃಷ್ಣಮೂರ್ತಿ ಭಟ್ ಮೊದಲಾದವರಿದ್ದರು.