ಸೋಣ ಶುಕ್ರವಾರ: ಕಟೀಲು ದುರ್ಗಾ ದರ್ಶನ
ಕಟೀಲು: ಸೋಣ (ಸಿಂಹಮಾಸ) ಶುಕ್ರವಾರ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕಮಲಪುಷ್ಪ ಹಾಗೂ ಗುಲಾಬಿ ಹಾರಗಳ ನಡುವೆ ಶುಭ್ರವಸನಧಾರಿಣಿ ಮಹಾಲಕ್ಷ್ಮೀ ಸ್ವರೂಪಿಣಿ ಶ್ರೀ ದುರ್ಗಾಂಬಿಕೆ ಶ್ರೀ ವರಮಹಾಲಕ್ಷ್ಮೀ ಪೂಜೆ ಪರ್ವಕಾಲದಲ್ಲಿ ಸಕಲಸಂಪತ್ಕಾರಕಳಾಗಿ ಭಕ್ತರಿಗೆ ಅಭಯ, ದರುಶನ ನೀಡುತ್ತಿದ್ದಾಳೆ.