Monday, August 15, 2022
Home ಅಧ್ಯಾತ್ಮ ಕಡಿಯಾಳಿ: ವರಮಹಾಲಕ್ಷ್ಮಿ ಪೂಜೆ

ಕಡಿಯಾಳಿ: ವರಮಹಾಲಕ್ಷ್ಮಿ ಪೂಜೆ

ಸುದ್ದಿಕಿರಣ ವರದಿ
ಶುಕ್ರವಾರ, ಆಗಸ್ಟ್ 5

ಕಡಿಯಾಳಿ: ವರಮಹಾಲಕ್ಷ್ಮಿ ಪೂಜೆ
ಉಡುಪಿ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಕಡಿಯಾಳಿ ಆಶ್ರಯದಲ್ಲಿ 38ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ಶುಕ್ರವಾರ ಕಾತ್ಯಾಯಿನಿ ಮಂಟಪ ದಲ್ಲಿ ನಡೆಯಿತು.
ಪಾಡಿಗಾರು ಶ್ರೀನಿವಾಸ ತಂತ್ರಿ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದದವರು ನಡೆಸಿದರು. ಮುತ್ತೈದೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಡಿಯಾಳಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ್ ಆಚಾರ್ಯ, ಮುಖ್ಯ ನಿರ್ವಾಹಕಿ ಪದ್ಮಾ ಆರ್., ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಮಾತೃ ಮಂಡಳಿಯ ಗೀತಾ ನಾಯಕ್, ನಿರ್ಮಲಾ ಪೈ, ಸುಪ್ರಭಾ ಆಚಾರ್ಯ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!