Wednesday, August 10, 2022
Home ಅಧ್ಯಾತ್ಮ ಕಡಿಯಾಳಿ ದೇವಳ ಸುತ್ತುಪೌಳಿಗೆ ಶಿಲಾನ್ಯಾಸ

ಕಡಿಯಾಳಿ ದೇವಳ ಸುತ್ತುಪೌಳಿಗೆ ಶಿಲಾನ್ಯಾಸ

ಉಡುಪಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇಲ್ಲಿನ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸವನ್ನು ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಈಚೆಗೆ ನೆರವೇರಿಸಿದರು.

ಜೀರ್ಣೋದ್ಧಾರ ವಿಜ್ಞಾಪನಾ ಪತ್ರವನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅನಾವರಣಗೊಳಿಸಿದರು. ಉದ್ಯಮಿ ರಮೇಶ್ ಬೈಲಕೆರೆ ಕರಸೇವಕರಿಗೆ ನೀಡಿದ ಟಿ- ಶರ್ಟನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಬಿಡುಗಡೆಗೊಳಿಸಿದರು.

ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ್ ಆಚಾರ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಅಂಚನ್, ನಗರಸಭಾ ಸದಸ್ಯೆ ಗೀತಾ ಶೇಟ್, ಪ್ರಧಾನ ತಂತ್ರಿ ಪಾಡಿಗಾರು ಶ್ರೀನಿವಾಸ ತಂತ್ರಿ, ಅರ್ಚಕ ಕೆ. ರಘುಪತಿ ಉಪಾಧ್ಯಾಯ, ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಸಗ್ರಿ ಗೋಪಾಲಕೃಷ್ಣ ಸಾಮಗ, ನಾಗರಾಜ ಶೆಟ್ಟಿ, ರಮೇಶ್ ಶೇರಿಗಾರ್, ಭಾಸ್ಕರ್ ಶೇರಿಗಾರ್, ವಸಂತ ರಾವ್, ಪದ್ಮಾ ರತ್ನಾಕರ್ ಮತ್ತು ಭಾರತಿ ಚಂದ್ರಶೇಖರ್, ವ್ಯವಸ್ಥಾಪನ ಮಂಡಳಿ ಸದಸ್ಯರು ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!