Wednesday, July 6, 2022
Home ಅಧ್ಯಾತ್ಮ ಕೊರೊನಾ ನಿಯಂತ್ರಣಕ್ಕೆ ಸುಬ್ರಹ್ಮಣ್ಯನಿಗೆ ಮೊರೆ

ಕೊರೊನಾ ನಿಯಂತ್ರಣಕ್ಕೆ ಸುಬ್ರಹ್ಮಣ್ಯನಿಗೆ ಮೊರೆ

ಉಡುಪಿ: ರಾಷ್ಟ್ರವನ್ನೇ ಬಾಧಿಸುತ್ತಿರುವ ಕೊರೊನಾ ನಿಯಂತ್ರಣಕ್ಕಾಗಿ ಹಾಗೂ ಈ ನಿಟ್ಟಿನಲ್ಲಿ ಅಹರ್ನಿಶಿ ಶ್ರಮಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಎಲ್ಲ ಪ್ರಯತ್ನಗಳಿಗೆ ಯಶ ಪ್ರಾಪ್ತಿಗಾಗಿ ಹಾರೈಸಿ ದೇಶದಲ್ಲಿ ಶಾಂತಿ ಸುಭಿಕ್ಷೆ ನೆಮ್ಮದಿ ಸಮೃದ್ಧಿ ನೆಲೆಗೊಳ್ಳುವಂತೆ ಆರೋಗ್ಯ ಮತ್ತು ಸಂಪತ್ಕಾರಕ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಮೊರೆ ಇಡಲಾಗಿದೆ.

ಮೇ 9ರಂದು ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ ಠಾಕೂರ್ ಹಾಗೂ ಸಮಾಜ ಸೇವಕ ವಾಸುದೇವ ಭಟ್ ನೇತೃತ್ವದಲ್ಲಿ ಉಡುಪಿಯ ಪ್ರಾಚೀನ ಸ್ಕಂದಾಲಯ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೂರ್ಯೋದಯ ಕಾಲದಲ್ಲಿ 1,008 ಸೀಯಾಳಾಭಿಷೇಕಪೂರ್ವಕ ಪ್ರಸನ್ನಪೂಜೆ ನಡೆಸಲಾಗುವುದು.

ಕೊರೊನಾ ಕಾರಣದಿಂದಾಗಿ ಭಕ್ತರಿಗೆ ಅವಕಾಶವಿಲ್ಲ. ದೇವಳದ ತಂತ್ರಿಗಳು ಮತ್ತು ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಗುವುದು. ಅಭಿಷೇಕಕ್ಕಾಗಿ 40 ರೂ. ಕಾಣಿಕೆಯನ್ನು ದೇವಳಕ್ಕೆ ಮೇ 8ರ ಸಂಜೆಯೊಳಗೆ ಮಾತ್ರ ಸಲ್ಲಿಸಬಹುದು. ಉಳಿಕೆ ಹಣವನ್ನು ಪೇಜಾವರ ಮಠದ ಗೋಶಾಲೆ ಮತ್ತು ಮುಖ್ಯಮಂತ್ರಿ ಕೋವಿಡ್ ನಿಧಿಗೆ ನೀಡಲಾಗುವುದು

ಹೆಚ್ಚಿನ ಮಾಹಿತಿಗಾಗಿ ಮಹೇಶ್ ಠಾಕೂರ್ 9741729999 ಅಥವಾ ವಾಸುದೇವ ಭಟ್ 9845895136 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!