Wednesday, July 6, 2022
Home ಅಧ್ಯಾತ್ಮ ವಿವಿಧ ಮಠಾಧೀಶರ ಚಾತುರ್ಮಾಸ್ಯ ವ್ರತಾಚರಣೆ

ವಿವಿಧ ಮಠಾಧೀಶರ ಚಾತುರ್ಮಾಸ್ಯ ವ್ರತಾಚರಣೆ

ಪರಿವ್ರಾಜಕರಾದ ಮಠಾಧೀಶರು ಮಳೆಗಾಲದಲ್ಲಿ ಒಂದೆಡೆ ನೆಲೆನಿಂತು ನಾಲ್ಕು ತಿಂಗಳ ಪರ್ಯಂತ ಚಾತುರ್ಮಾಸ್ಯ ಆಚರಿಸುವುದು ಕ್ರಮ. ಈ ಅವಧಿಯಲ್ಲಿ ಗೃಹಸ್ಥರು ಸನ್ಯಾಸಿಗಳ ಸೇವೆ ಮಾಡಿ, ಅವರ ಅಗತ್ಯತೆ ಪೂರೈಸಬೇಕಾದುದು ವಿಹಿತ ಧರ್ಮ. ಈ ಅವಧಿಯಲ್ಲಿ ಗುರು ದರ್ಶನ ಶ್ರೇಯಸ್ಕರ ಎಂಬುದು ಶಾಸ್ತ್ರವಿಧಿತ.

ಸಾಮಾನ್ಯವಾಗಿ ಹೆಚ್ಚಿನೆಲ್ಲಾ ಮಠಾಧೀಶರು ಆಷಾಢ ಹುಣ್ಣಿಮೆ (ವ್ಯಾಸಪೂರ್ಣಿಮೆ ಅಥವಾ ಗುರುಪೂರ್ಣಿಮೆ)ಯಿಂದ ಭಾದ್ರಪದ ಹುಣ್ಣಿಮೆ ವರೆಗೆ ಚಾತುರ್ಮಾಸ್ಯ ವ್ರತಾಚರಿಸುತ್ತಾರೆ. ಇನ್ನೂ ಕೆಲವರು ಅವರವರ ಮಠೀಯ ಸಂಪ್ರದಾಯದಂತೆ ಚಾತುರ್ಮಾಸ್ಯ ಆಚರಿಸುವುದುಂಟು.

ಈ ಅವಧಿಯಲ್ಲಿ ಬರುವ ಶ್ರಾವಣ ಸೋಮವಾರ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮೀ ವ್ರತ, ಗಣೇಶ ಚತುರ್ಥಿ ಇತ್ಯಾದಿ ಹಬ್ಬಹರಿದಿನಗಳನ್ನು ಸಂಭ್ರಮದಿಂದ ಶಿಷ್ಯವೃಂದದಿಂದೊಡಗೂಡಿ ಆಚರಿಸುವ ಕ್ರಮವುಂಟು.

ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತವನ್ನು ಯಾವ್ಯಾವ ಮಠಾಧೀಶರು ಎಲ್ಲಿ, ಎಂದು ಮತ್ತು ಎಲ್ಲಿಯ ವರೆಗೆ ಆಚರಿಸುತ್ತಿದ್ದಾರೆ ನೋಡೋಣ.

ಶೃಂಗೇರಿ ಶ್ರೀ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು- ಜು. 24ರಿಂದ ಸೆ. 20ರ ವರೆಗೆ- ನರಸಿಂಹವನ, ಶೃಂಗೇರಿ ಶ್ರೀಮಠ.

ಬಾಳೆಕುದ್ರು ಶ್ರೀ
ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ- ಜು. 24ರಿಂದ ಸೆ. 20- ಬಾಳೆಕುದ್ರು ಶ್ರೀಮಠ, ಹಂಗಾರಕಟ್ಟೆ, ಉಡುಪಿ

ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರಸರಸ್ವತಿ ಸ್ವಾಮೀಜಿ- ಜು. 24ರಿಂದ ಸೆ. 20- ಸ್ವರ್ಣವಲ್ಲೀ ಶ್ರೀಮಠ, ಸೋಂದಾ, ಶಿರಸಿ

ರಾಮಚಂದ್ರಾಪುರ ಶ್ರೀ
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ- ಜು. 24ರಿಂದ ಸೆ. 20- ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು

ಅದಮಾರು ಶ್ರೀ
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು- ಜು. 24ರಿಂದ ನ. 15- (ಉತ್ಥಾನ ಏಕಾದಶಿ) ಶ್ರೀಕೃಷ್ಣಮಠ, ಉಡುಪಿ
ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು- ಜು. 24ರಿಂದ ಸೆ. 20- ಶ್ರೀಕೃಷ್ಣಮಠ ಉಡುಪಿ

ಪಲಿಮಾರು ಶ್ರೀ
ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು- ಜು. 24ರಿಂದ ಸೆ. 20- ಪಲಿಮಾರು ಮಠ, ಉಡುಪಿ
ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು- ಜು. 24ರಿಂದ ಸೆ. 20- ಪಲಿಮಾರು ಮಠ, ಉಡುಪಿ

ಕಾಣಿಯೂರು ಶ್ರೀ
ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು- ಜು. 24ರಿಂದ ಸೆ. 20- ಕಾಣಿಯೂರು ಮಠ, ಉಡುಪಿ

ಸೋದೆ ಶ್ರೀ
ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು- ಜು. 24ರಿಂದ ಸೆ. 20- ಶ್ರೀ ವಾದಿರಾಜ ಕ್ಷೇತ್ರ, ಸೋದೆ

ಶೀರೂರು ಶ್ರೀ
ಶ್ರೀ ವೇದವರ್ಧನತೀರ್ಥ ಶ್ರೀಪಾದರು- ಜು. 24ರಿಂದ ಸೆ. 20- ಶ್ರೀ ವಾದಿರಾಜ ಕ್ಷೇತ್ರ, ಸೋದೆ

ಕೈವಲ್ಯ ಶ್ರೀ
ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ- ಜು. 24ರಿಂದ ಸೆ. 20- ವಾಲುಕೇಶ್ವರ ಮಠ, ಮುಂಬೈ

ಆನೆಗುಂದಿ ಶ್ರೀ
ಶ್ರೀ ಕಾಳಹಸ್ತೇಂದ್ರಸರಸ್ವತೀ ಸ್ವಾಮೀಜಿ- ಜು. 24ರಿಂದ ಸೆ. 20- ಶ್ರೀ ಆನೆಗುಂದಿ ಮಹಾಸಂಸ್ಥಾನ, ಕುತ್ಯಾರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!