ಉಡುಪಿ: ದ್ವೈತ ಮತ ಸಂಸ್ಥಾಪಕ ಲೋಕಗುರು ಶ್ರೀಮನ್ಮಧ್ವಾಚಾರ್ಯರ ಅವತಾರಭೂಮಿ ಪಾಜಕ ಕ್ಷೇತ್ರದಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಧ್ವನವಮಿ ಮಹೋತ್ಸವ ಶುಕ್ರವಾರ ಸಂಪನ್ನವಾಯಿತು.
ಮಹೋತ್ಸವ ಅಂಗವಾಗಿ ಕಳೆದ 7 ದಿನದಿಂದ ನಡೆಯುತಿದ್ದ ಋಕ್ಸಂಹಿತಾ ಯಾಗದ ಪೂರ್ಣಾಹುತಿ, ವಿದ್ವಾಂಸರಿಂದ ಸರ್ವಮೂಲ ಪಾರಾಯಣ, ಪ್ರವಚನ ನಡೆಯಿತು.
ಆಚಾರ್ಯ ಮಧ್ವರ ಪಾದದ ಗುರುತು ಇರುವ ಸ್ಥಳದಲ್ಲಿ ವಾದಿರಾಜ ಗುರುಗಳಿಂದ ಪ್ರತಿಷ್ಠಾಪಿತ ಆಚಾರ್ಯ ಮಧ್ವರ ಮೂರ್ತಿಗೆ ಕಾಣಿಯೂರು ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು