ನಮ್ಮ ಬಗ್ಗೆ
ಸುದ್ದಿಕಿರಣ.ಕಾಂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಗುರಿಯಾಗಿಟ್ಟುಕೊಂಡು ಜಗದಗಲದ ಸುದ್ದಿಯನ್ನು ಅಂಗೈಯಲ್ಲೇ ನೀಡುವ ಪ್ರಯತ್ನವಾಗಿ ಮೂಡಿಬಂದ ವೆಬ್ ಪತ್ರಿಕೆ. 2020ರ ಅಕ್ಟೋಬರ್ 26, ವಿಜಯ ದಶಮಿಯಂದು ಆರಂಭಗೊಂಡಿತು. ರಾಜಕೀಯ, ಕಲೆ, ಸಂಸ್ಕೃತಿ, ಸಾಹಿತ್ಯ, ತುಳು ಸಂಸ್ಕೃತಿ, ಅಭಿವ್ಯಕ್ತಿ…. ಹೀಗೆ ವೈವಿಧ್ಯಮಯ ಕ್ಷೇತ್ರಗಳತ್ತ ಬೆಳಕು ಚೆಲ್ಲುವ ಧ್ಯೇಯ. ಮನುಜಪ್ರೀತಿ, ನಿಷ್ಪಕ್ಷಪಾತ ನಿಖರ ಸುದ್ದಿ ಮಾಹಿತಿ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂಬುದು ನಮ್ಮ ನಂಬಿಕೆ. ಮಾತೃಭೂಮಿಯ ಕಾಳಜಿ ನಮ್ಮುಸಿರು. ಬ್ರೇಕಿಂಗ್ ನ್ಯೂಸ್ ಗಾಗಿ ಆತುರಪಟ್ಟು ಸುದ್ದಿ ನೀಡುವ ಹಪಹಪಿತನ ನಮಗಿಲ್ಲ. ಸುದ್ದಿಯ ಖಚಿತತೆಯ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಯಾವುದೇ ಆತುರ, ಸ್ಪರ್ಧೆ ನಮಗಿಲ್ಲ. ಸುದ್ದಿಕಿರಣ ದಲ್ಲಿ ಪ್ರಕಟಗೊಂಡ ಲೇಖನ, ವಿಮರ್ಶೆ, ವಿಶ್ಲೇಷಣೆ, ಸಂವಾದ, ಸಂದರ್ಶನ, ಕತೆ ಕಾವ್ಯ ಹಾಗೂ ಕಮೆಂಟ್ವಿ ಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ವೈಯಕ್ತಿವಾಗಿ ಲೇಖಕರದು. ಸಂಪಾದಕೀಯ ಬಳಗ ಅದಕ್ಕೆ ಹೊಣೆಯಲ್ಲ. ಆಕ್ಷೇಪಾರ್ಹ ಲೇಖನ, ವಿಮರ್ಶೆ, ವಿಶ್ಲೇಷಣೆ, ಸಂವಾದ, ಸಂದರ್ಶನ ಹಾಗೂ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ಕಿತ್ತುಹಾಕುವ ಅಧಿಕಾರ ಸುದ್ದಿಕಿರಣ ಸಂಪಾದಕೀಯ ಬಳಗಕ್ಕಿದೆ. ಪ್ರಚೋದನಕಾರಿ, ಮಾನಹಾನಿಕರ, ಆಕ್ಷೇಪಾರ್ಹ, ವ್ಯಕ್ತಿ, ಜಾತಿ, ಮತ, ಧರ್ಮ, ಪಕ್ಷ, ಸಮುದಾಯದ ವಿರುದ್ಧ ಪ್ರಚೋದಿಸು ಕಮೆಂಟ್ ಗಳಿಗೆ ಅವಕಾಶವಿಲ್ಲ. ಎಲ್ಲ ಜಾತಿ, ಮತ, ಪಂಥ, ಪಕ್ಷ ಹಾಗೂ ಜನಸಾಮಾನ್ಯರಿಗೂ ವೇದಿಕೆ ನೀಡಿ, ಸಮಾನವಾಗಿ ಕೊಂಡೊಯ್ಯುವ ಸುದ್ದಿಯ ಮೂಲಕ ಪೂರ್ವಾಗ್ರಹವಿಲ್ಲದ ಮಾಹಿತಿ ಕೊಡುವುದು ಈ ಜಾಲತಾಣದ ಉದ್ದೇಶ. ನೀವೂ ಬರೆಯಬಹುದು ಲೇಖನ, ಪ್ರಬಂಧ, ಹಾಸ್ಯ, ವಿಮರ್ಶೆ, ವಿಶ್ಲೇಷಣೆ, ಪ್ರವಾಸ ಕಥನ, ಕತೆ, ಕಾವ್ಯ ಬರೆಯಬಲ್ಲಿರಾದರೆ ನಿಮಗೆ ಸುದ್ದಿಕಿರಣ ಅವಕಾಶ ಕಲ್ಪಿಸುತ್ತದೆ. ನಿಮ್ಮ ಬರಹಗಳನ್ನು suddikirana20@gmail.com ಗೆ ಕಳುಹಿಸಿ. ಜಾಹೀರಾತು ಜಾಹೀರಾತುಗಳಿಗೆ ನಮ್ಮ ಇ-ಮೈಲ್ suddikirana20@gmail.com ಗೆ ನಿಮ್ಮ ಜಾಹೀರಾತು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಕಳಿಸಿ. ನಮ್ಮ ಮೊಬೈಲ್ ಸಂಖ್ಯೆ: 9448300989 ಸುದ್ದಿಕಿರಣ.ಕಾಂ ಬೆಳವಣಿಗೆಗೆ ತಮ್ಮ ಬೆಂಬಲ ನಿರೀಕ್ಷಿಸುತ್ತಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ… ನಿಮ್ಮವನೇ.. ಕಿರಣ್ ಮಂಜನಬೈಲು ಸಂಪಾದಕ www.suddikirana.com