Thursday, July 7, 2022
Home ಕ್ರೀಡೆ ಮಂಗಳೂರು ವಿ.ವಿ. ದೇಹದಾರ್ಢ್ಯ ಸ್ಪರ್ಧೆ

ಮಂಗಳೂರು ವಿ.ವಿ. ದೇಹದಾರ್ಢ್ಯ ಸ್ಪರ್ಧೆ

ಸುದ್ದಿಕಿರಣ ವರದಿ
ಗುರುವಾರ, ಜನವರಿ 13, 2022

ಮಂಗಳೂರು ವಿ.ವಿ. ದೇಹದಾರ್ಢ್ಯ ಸ್ಪರ್ಧೆ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಚಾಂಪಿಯನ್ ಶಿಪ್ ಗಳಿಸಿದೆ. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ರನ್ನರ್ಸ್ ಪ್ರಶಸ್ತಿ ಗಳಿಸಿದೆ.

ಆಳ್ವಾಸ್ ಪ್ರಥಮ ದರ್ಜೆ ಕಾಲೇಜಿನ ಅಕ್ಷಯ ಕೃಷ್ಣ ಮಿಸ್ಟರ್ ಯುನಿವರ್ಸಿಟಿ ಕಿರೀಟ ಧರಿಸಿದರು.

ವಿವಿಧ ಪ್ರಕಾರಗಳ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಹಲವು ಕಾಲೇಜುಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ| ಗಣನಾಥ ಎಕ್ಕಾರು ವಹಿಸಿದ್ದರು.

ಮಲ್ಪೆ ಲಯನ್ಸ್ ಅಧ್ಯಕ್ಷ ಕೃಷ್ಣಾನಂದ ಮಲ್ಪೆ, ಶಿಕ್ಷಣ ತಜ್ಞ ದಯಾನಂದ ಶೆಟ್ಟಿ ಕೊಜಕುಳಿ, ನಗರಸಭಾ ಸದಸ್ಯ ವಿಜಯ ಕೊಡವೂರು, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ಉಪ ನಿರ್ದೇಶಕ ಹರಿದಾಸ ಕೂಳೂರು, ಪರಿಶೀಲಕ ಹರೀಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ದಿಲೀಪ್ ಕುಮಾರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಶ್ವನಾಥ ಕರಬ ಅಭ್ಯಾಗತರಾಗಿದ್ದರು.

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮಂಜುನಾಥ ಸ್ವಾಗತಿಸಿ, ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ| ಎಚ್. ಕೆ. ವೆಂಕಟೇಶ್ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ| ರಾಮಚಂದ್ರ ಪಾಟ್ಕರ್ ವಂದಿಸಿ, ಪ್ರಶಸ್ತಿ ವಿಜೇತರ ವಿವರ ನೀಡಿದರು.

ವಿಜೇತರ ವಿವರ
60 ಕೆ.ಜಿ. ವಿಭಾಗ- ಅಭಿಲಾಷ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕಡಿಯೂರು (ಪ್ರಥಮ), ಶ್ರೀಧರ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ (ದ್ವಿತೀಯ) ಮತ್ತು ವೈಭವ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು (ತೃತೀಯ).

65 ಕೆ.ಜಿ. ವಿಭಾಗ- ಶರತ್ ಶೇರಿಗಾರ್, ಆಳ್ವಾಸ್ ಕಾಲೇಜು ಮೂಡುಬಿದಿರೆ (ಪ್ರಥಮ), ಅಮೃತ್ ಎನ್. ಕೆ., ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು (ದ್ವಿತೀಯ) ಮತ್ತು ಶರತ್ ಜಿ., ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕಡಿಯೂರು (ತೃತೀಯ).

70 ಕೆ.ಜಿ. ವಿಭಾಗ- ಜಯಜಿತ್ ಸಿಂಗ್, ಆಳ್ವಾಸ್ ಕಾಲೇಜು ಮೂಡುಬಿದಿರೆ (ಪ್ರಥಮ), ಕಾರ್ತಿಕ್ ರಾಜ್, ವಿವೇಕಾನಂದ ಕಾಲೇಜು ಪುತ್ತೂರು (ದ್ವಿತೀಯ) ಮತ್ತು ರಿಯಾನ್ ಅನ್ಸಾನ್ ಕುಟಿನ್ಹೊ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು (ತೃತೀಯ).

75 ಕೆ.ಜಿ. ವಿಭಾಗ- ಕಾರ್ತಿಕ್ ಬಿ. ಎಂ., ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ (ಪ್ರಥಮ), ಯೋಗೀಶ್, ಆಳ್ವಾಸ್ ಕಾಲೇಜು ಮೂಡುಬಿದರೆ (ದ್ವಿತೀಯ) ಮತ್ತು ವಿಶ್ವಾಸ್, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ (ತೃತೀಯ).

80 ಕೆ.ಜಿ. ವಿಭಾಗ- ಪ್ರಜ್ವಲ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ (ಪ್ರಥಮ)

85 ಕೆ.ಜಿ. ವಿಭಾಗ- ಅಕ್ಷಯ್ ಕೃಷ್ಣ, ಆಳ್ವಾಸ್ ಕಾಲೇಜು ಮೂಡುಬಿದಿರೆ (ಪ್ರಥಮ)

90 ಕೆ.ಜಿ. ವಿಭಾಗ- ಮೋಕ್ಷಿತ್, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ (ಪ್ರಥಮ) ಮತ್ತು ರೋಹಿತ್ ಜಿ. ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ಮಾವರ (ದ್ವಿತೀಯ)

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!