ಸುದ್ದಿಕಿರಣ ವರದಿ
ಭಾನುವಾರ, ಮೇ 15
ಮಾಜಿ ಕ್ರಿಕೆಟಿಗ ಆ್ಯಂಡ್ರೂ ಸೈಮಂಡ್ಸ್ ಅಪಘಾತಕ್ಕೆ ಬಲಿ
ಕ್ವಿನ್ಸ್ಲ್ಯಾಂಡ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರೂ ಸೈಮಂಡ್ಸ್ (46) ಕಾರು ಅಪಘಾತದಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.
ಕಳೆದ ತಡರಾತ್ರಿ ಕ್ವಿನ್ಸ್ಲ್ಯಾಂಡ್ ನ ಎಲಿಸ್ ಸೇತುವೆಯ ಹರ್ವೇ ರೋಡ್ ರೇಂಜ್ ನಲ್ಲಿ ಸೈಮಂಡ್ಸ್ ಕಾರು ಪಲ್ಟಿಯಾದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು.
ಸೈಮಂಡ್ಸ್ ನಿಧನದಿಂದ ಕ್ರಿಕೆಟ್ ಜಗತ್ತು ಶೋಕದಲ್ಲಿ ಮುಳುಗಿದೆ.
1975ರ ಜೂನ್ 9ರಂದು ಜನಿಸಿದ್ದ ಸೈಮಂಡ್ಸ್ ಆಲ್ ರೌಂಡರ್ ಆಗಿದ್ದರು. 2 ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವಾಗ ಅವರು ತಂಡದಲ್ಲಿದ್ದರು.
2008ರ ಏಪ್ರಿಲ್ 24ರಂದು ಐಪಿಎಲ್ ನಲ್ಲಿ ಹೈದರಾಬಾದ್ ಪರ ಆಡಿದ್ದ ಸೈಮಂಡ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ ಸ್ಫೋಟಕ ಆಟ ಪ್ರದರ್ಶಿಸಿದರು.
ಕೇವಲ 53 ಎಸೆತಗಳಲ್ಲಿ ಅಜೇಯ 117 ರನ್ ಗಳಿಸಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದರು.