Thursday, December 2, 2021
Home ಕ್ರೀಡೆ ವಿಶೇಷ ಒಲಿಂಪಿಕ್ಸ್ ಡ್ಯಾನ್ಸ್ ಸ್ಪೋರ್ಟ್ಸ್ ಗೆ ಅರ್ಚನಾ ಜೈವಿಠಲ್ ಆಯ್ಕೆ

ವಿಶೇಷ ಒಲಿಂಪಿಕ್ಸ್ ಡ್ಯಾನ್ಸ್ ಸ್ಪೋರ್ಟ್ಸ್ ಗೆ ಅರ್ಚನಾ ಜೈವಿಠಲ್ ಆಯ್ಕೆ

ವಿಶೇಷ ಒಲಿಂಪಿಕ್ಸ್ ಡ್ಯಾನ್ಸ್ ಸ್ಪೋರ್ಟ್ಸ್ ಗೆ ಅರ್ಚನಾ ಜೈವಿಠಲ್ ಆಯ್ಕೆ

(ಸುದ್ದಿಕಿರಣ ವರದಿ)
ಉಡುಪಿ: ಆಸ್ಟ್ರಿಯ ದೇಶದ ಗ್ರಾಝ್ನಲ್ಲಿ ಆ. 20ರಂದು ನಡೆಯುವ ಮೊತ್ತ ಮೊದಲ ವಿಶೇಷ ಒಲಿಂಪಿಕ್ಸ್ ಡ್ಯಾನ್ಸ್ ಸ್ಪೋರ್ಟ್ಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್ ಭಾರತವನ್ನು ಪ್ರತಿನಿಧಿಸಿ ಸ್ಪರ್ಧೆಯೊಂದರಲ್ಲಿ ಭಾಗವಹಿಸಲಿದ್ದಾರೆ.

ಡ್ಯಾನ್ಸ್ ಸ್ಪೋರ್ಟ್ಸ್ಗೆ ವಿಶೇಷ ಒಲಿಂಪಿಕ್ಸ್ ನಲ್ಲಿ ಅಧಿಕೃತ ಮಾನ್ಯತೆ ದೊರಕಿದ್ದು 2019ರಲ್ಲಿ ಲಭಿಸಿದ್ದು, ಇದೀಗ ಈ ಕ್ರೀಡೆಯ ಮೊತ್ತಮೊದಲ ವಿಶ್ವ ಚಾಂಪಿಯನ್ ಶಿಪ್ ಆಸ್ಟ್ರಿಯದಲ್ಲಿ ನಡೆಯಲಿದೆ.

ಅದರಲ್ಲಿ ಭಾರತ, ಅಮೆರಿಕ, ನಾರ್ವೆ, ಉಕ್ರೇನ್ ಸೇರಿದಂತೆ ವಿಶ್ವದ 13 ದೇಶಗಳ ವಿಶೇಷ ನೃತ್ಯಗಾರರು ನಾಲ್ಕು ವಿಭಾಗಗಳಲ್ಲಿ (ಸೋಲೊ, ಜೋಡಿ, ದಂಪತಿ ಹಾಗೂ ಟೀಮ್) ಸ್ಪರ್ಧಿಸಲಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಹಾಗೂ ಮಣಿಪಾಲ ಅರ್ಚನಾ ಟ್ರಸ್ಟ್ ನಡೆಸುತ್ತಿರುವ ಆಸರೆ ಸಂಸ್ಥೆಯ ಅರ್ಚನಾ ಜೈವಿಠಲ್ ಎಂ.ಜೆ., ಕ್ಲಾಸಿಕಲ್ ಸೋಲೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿ ಇವರಾಗಿದ್ದಾರೆ.

ಅರ್ಚನಾ ಆ .19- 20ರಂದು 90 ಸೆಕೆಂಡ್ಸ್ ಗಳ ಕಾಲ ಏಕಾಂಗಿಯಾಗಿ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ ಪ್ರದರ್ಶನ ನೀಡಲಿದ್ದಾರೆ. ಕಳೆದ ಕೆಲವು ವರ್ಷದಿಂದ ಅರ್ಚನಾ ಭರತನಾಟ್ಯದಲ್ಲಿ ವಿಶೇಷ ತರಬೇತಿ ಪಡೆಯುತಿದ್ದಾರೆ. ಕೋವಿಡ್ ಅವಧಿಯಲ್ಲೂ ಅವರು ನಿರಂತರವಾಗಿ ತರಬೇತಿ ಪಡೆಯುತ್ತಿದ್ದರು.

2013ರಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ ಅರ್ಚನಾ ಕಂಚಿನ ಪದಕ ಪಡೆದಿದ್ದರು. 2019ರಲ್ಲಿ ಅಬುಧಾಬಿಯ ವಿಶ್ವ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಇದೇ ಸಾಧನೆಯನ್ನು ಪುನರಾವರ್ತಿಸಿದ್ದರು.

ಡ್ಯಾನ್ಸ್ ಸ್ಪೋರ್ಟ್ಸ್ ನಲ್ಲಿ  ದೇಶವನ್ನು ಪ್ರತಿನಿಧಿಸಲು ಅರ್ಚನಾ ಅವರು ಶುಕ್ರವಾರ ಆಸ್ಟ್ರಿಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!