Thursday, December 2, 2021
Home ಕ್ರೀಡೆ ಫೆ. 13ರಂದು ಮಣಿಮಾಲ್ ಮ್ಯಾರಥಾನ್

ಫೆ. 13ರಂದು ಮಣಿಮಾಲ್ ಮ್ಯಾರಥಾನ್

ಫೆ. 13ರಂದು ಮಣಿಮಾಲ್ ಮ್ಯಾರಥಾನ್
(ಸುದ್ದಿಕಿರಣ ವರದಿ)

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ 5ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ ಫೆ. 13ರಂದು ನಡೆಯಲಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಓಟ ನಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಸುಧಾರಿಸಲು ಅತ್ಯುತ್ತಮ ವಿಧಾನವಾಗಿದೆ. ಇದು ನಮ್ಮ ಆರೋಗ್ಯದ ಪ್ರತಿಯೊಂದು ಭಾಗಕ್ಕೂ ಪ್ರಯೋಜನಕಾರಿ. ಒತ್ತಡವನ್ನು ನಿವಾರಿಸುತ್ತದೆ ಮತ್ತು ನಮ್ಮ ಮನಃಸ್ಥಿತಿ ಮತ್ತು ಆನಂದ ಹೆಚ್ಚಿಸುತ್ತದೆ.

ಕೋವಿಡ್ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು 2022ರಲ್ಲಿ ನಮ್ಮ ಪರಂಪರೆಯ ಮಣಿಪಾಲ್ ಮ್ಯಾರಥಾನ್ ನ್ನು ಮರಳಿ ತರಲು ನಾವು ಉತ್ಸುಕರಾಗಿದ್ದೇವೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಪ್ರಧಾನಿ ಮೋದಿ ನೀಡಿದ `ಫಿಟ್ ಇಂಡಿಯಾ’ ಕರೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ. ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಕನಿಷ್ಠ ಅರ್ಧ ಘಂಟೆಯಾದರೂ ವ್ಯಾಯಾಮ ಮಾಡಲು ಸೂಚಿಸಲಾಗಿದೆ.

ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸುಮಾರು 10 ವರ್ಷದಿಂದ ಮಣಿಪಾಲ ಸಂಸ್ಥೆಯೊಂದಿಗೆ ಸೇರಿಕೊಂಡು ಮ್ಯಾರಥಾನ್ ಆಯೋಜಿಸುತ್ತಿದೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮಾಹೆ ಕುಲಸಚಿವ ಡಾ. ನಾರಾಯಣ ಸಭಾಹಿತ್, ಓಟ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಹೊಸ ಜನರನ್ನು ಭೇಟಿ ಮಾಡಲು ಮತ್ತು ಬಲವಾದ ಸಂಬಂಧಗಳನ್ನು ರೂಪಿಸಲು ಸಹಾಯ ಮಾಡುವ ದೈಹಿಕ ವ್ಯಾಯಾಮವಾಗಿದೆ. ಗುರಿ ರೂಪಿಸಲು ಮತ್ತು ಸಾಧಿಸಲು ಓಟ ಉತ್ತಮ ವಿಧಾನವಾಗಿದೆ. ನಮ್ಮ ಜೀವನದ ಗುರಿ ರೂಪಿಸಲು ಬೂಟು ಧರಿಸಿ ಕೆಲಸಕ್ಕೆ ಹೋಗುವ ಸಮಯ ಬಂದಿದೆ ಎಂದರು.

2022ರ ಫೆಬ್ರವರಿ 13ರಂದು ನಿಗದಿಯಾದ ಮಣಿಪಾಲ ಮ್ಯಾರಥಾನ್ ನ 5ನೇ ಆವೃತ್ತಿ ಘೋಷಿಸಲು ನಮಗೆ ಸಂತೋಷವಾಗಿದೆ ಎಂದರು.

ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗ ನಿರ್ದೇಶಕ ಎಸ್. ಪಿ. ಕರ್, ಕ್ರೀಡಾ ಪರಿಷತ್ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಪ್ರಕಾಶ್ಚಚಂದ್ರ, ಡಾ. ಶೋಭಾ ಈರಪ್ಪ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!