Tuesday, May 17, 2022
Home ಕ್ರೀಡೆ ಮೇ 8: ಮಲ್ಪೆ ಬೀಚ್ ನಲ್ಲಿ ತುಳುನಾಡ ಗೊಬ್ಬುಲು

ಮೇ 8: ಮಲ್ಪೆ ಬೀಚ್ ನಲ್ಲಿ ತುಳುನಾಡ ಗೊಬ್ಬುಲು

ಸುದ್ದಿಕಿರಣ ವರದಿ
ಮಂಗಳವಾರ, ಮೇ 3

ಮೇ 8: ಮಲ್ಪೆ ಬೀಚ್ ನಲ್ಲಿ ತುಳುನಾಡ ಗೊಬ್ಬುಲು
ಉಡುಪಿ: ತುಳುಕೂಟ ಉಡುಪಿ ಆಶ್ರಯದಲ್ಲಿ ಇಂದ್ರಾಳಿ ಲಯನ್ಸ್ ಮತ್ತು ಲಿಯೋ ಕ್ಲಬ್ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಮಟ್ಟದ ತುಳು ಭಾಷಿಗರಿಗಾಗಿ ತುಳುನಾಡ ಗೊಬ್ಬುಲು ಈ ತಿಂಗಳ 8ರಂದು ಮಲ್ಪೆ ಬೀಚ್ ನಲ್ಲಿ ನಡೆಯಲಿದೆ ಎಂದು ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಂಗವಾಗಿ ತುಳುನಾಡ ಪರಿಕರಗಳ ವಿಶೇಷ ಪ್ರದರ್ಶನ, ತುಳುನಾಡ ತಿಂಡಿ ತಿನಿಸುಗಳ ಮೇಳ ಹಾಗೂ ತುಳುನಾಡಿನ ಸಂಗೀತ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋ ಬಾಲ್, ಕಬಡ್ಡಿ, ಮಾನವ ಗೋಪುರ, ಮರಳು ಶಿಲ್ಪ, ಪೊಕ್ಕು, ಸೊಪ್ಪಾಟ, ಪಾಲೆದ ಗೊಬ್ಬು, ಚೆನ್ನೆಮಣೆ, ತಪ್ಪಂಗಾಯಿ, ಮುಡಿ ಕಟ್ಟುವುದು, ತೆಂಗಿನ ಸೋಗೆ ಹೆಣೆಯುವುದು, ತೆಂಗಿನಕಾಯಿ ಸಿಪ್ಪೆ ಸುಲಿಯುವುದು ಮತ್ತು ಮಕ್ಕಳಿಗಾಗಿ ಸ್ಥಳದಲ್ಲಿಯೇ ವಿಶೇಷ ಸ್ಪರ್ಧೆ ನಡೆಸಲಾಗುತ್ತದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದವರು ವಿವರಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ಮೇ 5ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9342749131ನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಜೊತೆ ಕಾರ್ಯದರ್ಶಿ ಮನೋಹರ ಶೆಟ್ಟಿ, ಕೋಶಾಧಿಕಾರಿ ಚೈತನ್ಯ ಎಂ. ಜಿ., ಉಪಾಧ್ಯಕ್ಷ ಮೊಹಮ್ಮದ್ ಮೌಲಾ, ತುಳುವೆರೆ ಗೊಬ್ಬುಲು ಸಂಚಾಲಕ ದಿವಾಕರ ಸನಿಲ್ ಮುಂತಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!