1. ಬಾಗೇಪಲ್ಲಿ
ಬಾಗೇಪಲ್ಲಿ : ಚೇಳೂರು ತಾಲೂಕಿನ ಕಲ್ಲೂರೋನುಕುಂಟ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆತಂಕದಲ್ಲಿ ಸುತ್ತಮುತ್ತಲಿನ ರೈತರು ಹಾಗು ಗ್ರಾಮಸ್ಥರು..!! ತಾಲೂಕಿನ ನಾರೇಮದ್ದೆಪಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕಲ್ಲೂರೋನುಕುಂಟೆ ಗ್ರಾಮದ ಪಕ್ಕದ ಬೆಟ್ಟದ ಗುಡ್ಡೆಯಲ್ಲಿ ಈ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ,ಮೊದಲೇ ನಮ್ಮ ತಾಲೂಕು ಅತಿವೃಷ್ಟಿ, ಅನಾವೃಷ್ಟಿ,ಅಕಾಲವೃಷ್ಟಿ, ಹವಾಮಾನದ ಏರುಪೇರು ಮುಂತಾದ ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದೆ,ಹೀಗಿರುವಾಗ ಈ ಅಕ್ರಮ ಕಲ್ಲು ಗಣಿಗಾರಿಕೆ ಇಂದ ಇನ್ನು ಹಲವು ರೀತಿಯ ತೊಂದರೆಗಳು ಇಲ್ಲಿನ ರೈತರು ಅನುಭವಿಸುವ ಸಂಭವ ಹೆಚ್ಚಿದೆ ಎಂದು ಹೇಳಬಹುದು.ಈ ಹಿಂದೆ ತಾಲೂಕಿನ ಶಾಸಕರಾದ ಎಸ್, ಎನ್.ಸುಬ್ಬಾರೆಡ್ಡಿ ಅಕ್ರಮ ಗಣಿಗಾರಿಕೆ ಕಂಡು ಶಾಸಕರೇ ಸ್ಥಳಕ್ಕೆ ಅಧಿಕಾರಿಗಳ ಜೊತೆ ಬಂದು ಗಣಿಗಾರಿಕೆ ನಿಲ್ಲಿಸಿ,ಮುಂದುವರಿಸಲು ಬಿಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು, ಒಂದು ತಿಂಗಳು ಸುಮ್ಮನೆ ಇದ್ದು ಈಗ ಪುನ್ಹ ಪ್ರಾರಂಭ ಮಾಡಲು ತಯಾರಿ ನಡೆಸುತ್ತಿದ್ದಾರೆ,ಇದರಿಂದ ಸುತ್ತಮುತ್ತಲಿನ ರೈತರು ಹಲವು ಪರಿನಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರೈತರು ಹೈರಾಣ ಆಗಿದ್ದಾರೆ.ಗಣಿಗಾರಿಕೆ ಬ್ಲಾಸ್ಟ್ ನಿಂದ ಕೊಳವೆ ಬಾವಿಗಳ ಮೋಟರ್ ಪಂಪ್ ಕೊಳವೆ ಬಾವಿಗೆ ಬೀಳುತ್ತಿವೆ, ಹಾಗು ಹೊಲ ಗದ್ದೆಗಳಲ್ಲಿ ಬೆಳೆದ ಬೆಲೆ ನಾಶವಾಗುತ್ತಿದೆ, ಕರ್ಕಶ ಶಬ್ದಗಳಿಂದ ಮನೆಗಳಲ್ಲಿ, ಊರುಗಳಲ್ಲಿ ಭೂಕಂಪದ ಅನುಭವ ಆದಂತಿದೆ ಎಂದು ರೈತರು ಗೋಲಾಡುತ್ತಿದ್ದಾರೆ.ಕೆಲ ಮನುಷ್ಯರ ಸ್ವಾರ್ಥಕ್ಕಾಗಿ, ಸುಖಕ್ಕಾಗಿ ವ್ಯಾಪಾರಕ್ಕಾಗಿ, ಹವಾಮಾನವನ್ನು ಮತ್ತು ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾನೆ, ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ, ಇದರ ಪರಿಣಾಮವಾಗಿ ಪ್ರಕೃತಿ ವಿಕೋಪ ಉಂಟಾಗುತ್ತಿರುವುದು ಅಂತು ಸತ್ಯ,ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಇತ್ತ ಗಮನ ಅರಿಸಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟಲು ರೈತರು ಹಾಗು ಗ್ರಾಮಸ್ಥರು ಮನವಿ ಮಾಡಿದ್ದಾರೆ.

3. ಸುದ್ದಿ ಕಿರಣ ಟಿವಿ ಬಾಳಿನ ಬೆಳಕು
ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ
ಸಂಪರ್ಕಿಸಿ :96866 65456
0 Comments