ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು

ಉಚಿತ ಆರೋಗ್ಯ ಶಿಬಿರ

Posted  77 Views updated 2 months ago

1. ಚನ್ನರಾಯಪಟ್ಟಣ

ಚನ್ನರಾಯಪಟ್ಟಣ: ಮಾಜಿ ಎಂಎಲ್ಸಿ ಎಂ ಎ ಗೋಪಾಲಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.ನಗರದ ಗಣಪತಿ ಆಸ್ಥಾನ ಮಂಟಪದ ಎದುರು ಇರುವ ಸರ್ಕಾರಿ ಪೇಟೆ ಶಾಲೆಯ ಆವರಣದಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಡಾಕ್ಟರ್ ಮಹೇಶ್ ವೈದ್ಯರು ಅಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದ ಸಾಮಾಜಿಕ ಕಳಕಳಿಯಿಂದ ನೊಂದವರ,

ಹಿರಿಯರ ಮತ್ತು ಬಡವರ ಸ್ಥಿತಿ-ಗತಿಗಳನ್ನು ಅರ್ಥೈಯಿಸಿಕೊಂಡು ಚಿಕಿತ್ಸೆ ನೀಡಿದಲ್ಲಿ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ ಎಂದರು.  

ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುತ್ತಿರುವ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡುತ್ತಿರುವ ಗೋಪಾಲಸ್ವಾಮಿಯ ಅಭಿಮಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೈಮ್ಸ್ ಗಂಗಾಧರ್ ಮಾತನಾಡಿದ ಸುಸಜ್ಜಿತ ಆರೋಗ್ಯ ಸೌಲಭ್ಯವನ್ನು ಹೊಂದಿರುವ ಬಿಜಿಎಸ್, ಕಿದ್ವಾಯಿ, ಕೆಂಪೇಗೌಡ ಆಸ್ಪತ್ರೆಯು ವೈದ್ಯರುಗಳು ರೋಗಿಗಳ ಹಿತದೃಷ್ಟಿಯಿಂದ ಉತ್ತಮ ಸೇವೆ ಮಾಡುತ್ತಿದ್ದಾರೆ,ಇದಕ್ಕೆ ಸಂಸ್ಥೆಯ ಎಲ್ಲರ ಸಹಕಾರ ಮಹತ್ತರವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕ ಎಂ ಎ ಗೋಪಾಲಸ್ವಾಮಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ನನ್ನ ಜನ್ಮದಿನದಂದು ನನ್ನ ಅಭಿಮಾನಿಗಳು ಉಚಿತ ಆರೋಗ್ಯ ತಪಾಸಣೆ ಆಯೋಜನೆ ಮಾಡಿದ್ದಾರೆ, ಈ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿ ಎಲ್ಲಾ ರೋಗಿಗಳಿಗೆ ಉಚಿತ ಔಷಧಿಗಳನ್ನು ನೀಡುತ್ತಿರುವ ಬಿಜಿಎಸ್, ಕಿದ್ವಾಯಿ, ಕೆಂಪೇಗೌಡ ಆಸ್ಪತ್ರೆ ಸೇರಿದಂತೆ ವಿವಿಧ ಸಂಸ್ಥೆಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಮಹೇಶ್, ಡಾಕ್ಟರ್ ನಾಗೇಶ್, ಡಾಕ್ಟರ್ ರಮೇಶ್ ಬಾಬು, ಡಾಕ್ಟರ್ ಭಾವನಾ, ಕಾಂಗ್ರೆಸ್ ಮುಖಂಡರಾದ ಎಂ ಕೆ ಮಂಜು ಗೌಡ, ಪುರಸಭಾ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಿ ಎನ್ ಶಶಿಧರ್, ಟೈಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಟೈಮ್ಸ್ ಗಂಗಾಧರ್, ಸಿ ಎನ್ ಅಶೋಕ್, ಸಿ ಕೆ ಕೃಷ್ಣ, ಮಹಾದೇವ್, ಸತ್ಯನಾರಾಯಣ್, ಲ.ನಾ ಗುಪ್ತ, ಕಾಂಗ್ರೆಸ್ ಯುವ ಮುಖಂಡರಾದ ವಡ್ಡರಹಳ್ಳಿ ಮೋಹನ್,ಕಲ್ಕೆರೆ ಮೋಹನ್, ಎ ಜೆ ವೇಣುಗೋಪಾಲ್, ಮುರುವನಹಳ್ಳಿ ಕಾರ್ತಿಕ್,ಸೇರಿದಂತೆ ಇತರರು ಹಾಜರಿದ್ದರು.

Image

3. ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ

ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments