ಗೋಹತ್ಯೆ ನಿಯಮ ಉಲ್ಲಂಘಹಿಸಿದರೆ ಸೂಕ್ತ ಕ್ರಮ:ಡಾ ಬಿ ಎಚ್ ಕನ್ನೂರ 

ಡಾ||ಭಿ, ಎಚ್, ಕನ್ನೂರ

Posted  36 Views updated 2 months ago

1. ಇಂಡಿ

ಇಂಡಿ:(ಅ.06): ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದರೂ ಇಂಡಿ ತಾಲೂಕಿನಲ್ಲಿ ಮಾತ್ರ ಗೋ ಮಾಂಸ ಮಾರಾಟ ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬಿದ್ದಿಲ್ಲ. ಹೊಸ ಕಾಯ್ದೆ ಕಠಿಣವಾಗಿ ಜಾರಿಯಾಗಬಹುದು ಎನ್ನುವ ಊಹೆ ಸುಳ್ಳಾಗಿದೆ. ಪ್ರತಿದಿನ ಇಂಡಿ ತಾಲೂಕಿನಲ್ಲಿ ಅಕ್ರಮ ಗೋಮಾಂಸ ಸಾಗಾಟ, ಹಾಗೂ ಗೋಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ.ಇಂಡಿ ತಾಲೂಕಿನಲ್ಲಿ ಮತ್ತೆ ಗೋಕಳ್ಳರ ಅಟ್ಟಹಾಸ ಗೋ ಮಾಂಸ ಸಾಗಾಟ ಮಿತಿಮೀರಿದೆ. ಪೊಲೀಸರ ಕಣ್ಣು ತಪ್ಪಿಸಲು ಗೋಕಳ್ಳರು ನಾನಾ ರೀತಿಯ ತಂತ್ರ ಹೆಣೆಯುತ್ತಿದ್ದಾರೆ. ಇತ್ತೀಚಿನ ಕೆಲವೊಂದು ಪ್ರಕರಣಗಳನ್ನು ನೋಡವದಾದರೆ ಪ್ರಕರಣ-1 ಸೆ.17 ರಂದು ಸೋಲಾಪುರದಿಂದ ಬುಲೆರೋ ವಾಹನದಲ್ಲಿ 60ಕ್ಕೂ ಅಧಿಕ ಆಕಳು ಮತ್ತು ಸಣ್ಣ ಕರುಗಳನ್ನು ಕಟಾವು ಮಾಡಲು ಮಾರಕಸ್ತ್ರಗಳ ಸಮೇತ ಕೊಂಡೊಯ್ಯುತ್ತಿದ್ದ ಗೋಕಳ್ಳರು ಇತ್ತೀಚೆಗೆ ಅಂಜುಟಗಿಯಲ್ಲಿ ಗ್ರಾಮಸ್ಥರ ಬಲೆಗೆ ಬಿದ್ದಿದ್ದರು, ಪ್ರಕರಣ 2 ಅಗಸ್ಟ:02 ರಂದು ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ರಸ್ತೆಯಲ್ಲಿ ಬರೋಬ್ಬರಿ 114ಕ್ಕೂ ಅಧಿಕ ಗೋವುಗಳು ಸಾಗಾಟ ವೇಳೆ ಖಚಿತ ಮಾಹಿತಿಯ ಮೇರೆಗೆ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ವಶ ಪಡಿಸಿಕೊಂಡರು,ಕೇವಲ 2 ತಿಂಗಳಲ್ಲಿ ನಡೆದ ಈ ಪ್ರಕರಣಗಳು ಉದಾಹರಣೆ ಸಾಕು, ಗೋಹತ್ಯಾ ನಿಷೇಧ ಕಾಯ್ದೆ ಇಂಡಿ ತಾಲೂಕಿನಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ ಅನ್ನೋದಕ್ಕೆ ಇದುವೇ ಸಾಕ್ಷಿ ಹೇಳುತ್ತಿದೆ. ಗೋ ಕಳ್ಳರಿಗೆ ಭಯಹುಟ್ಟಿಸುವ ಯಾವುದೇ ಅಂಶಗಳು ಈ ಕಾಯ್ದೆಯಲ್ಲಿ ಇಲ್ಲ ಅನ್ನೋದು ಈ ಮೂಲಕ ಸಾಬೀತಾಗಿದೆ.ದಿನ ಬೆಳಗಾದರೆ ಗೋ ಹತ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿವೆ 13 ವರ್ಷ ಮೇಲ್ಪಟ್ಟ ಎಮ್ಮೆ ಅಥವಾ ಕೋಣವನ್ನು ಸಕ್ಷಮ ಪ್ರಾಧಿಕಾರಿಯ ಶಿಫಾರಸ್ಸಿನ ಮೇರೆಗೆ ವಧೆಗೆ ಅವಕಾಶ ನೀಡಲಾಗಿದೆ**ಇದನ್ನು ಬಿಟ್ಟು ಆಕಳು, ಆಕಳು ಕರು, ಗೂಳಿ ಮತ್ತು ಎತ್ತು ಹದಿಮೂರು ವರ್ಷದೊಳಗಿನ ಕೊಣ ಅಥವಾ ಎಮ್ಮೆ ಹತ್ಯೆ ಮಾಡಿದರೆ ನಮಗೆ ಮಾಹಿತಿ ಬಂದ್ದರೆ ಪೊಲೀಸ್ ಇಲಾಖೆಗೆ ತಿಳಿಸಿ ರಕ್ಷಣೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾಬೀತಾದರೆ ಅವರ ಮೇಲೆ ಕಾನೂನಿನ ಪ್ರಕ್ರಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು*) ಸಹಾಯಕ ನಿರ್ದೇಶಕರು/ಮುಖ್ಯ ಪಶು ವೈದ್ಯಧಿಕಾರಿಗಳು ಡಾ||ಭಿ, ಎಚ್, ಕನ್ನೂರ

ಈ ಸಂದರ್ಭದಲ್ಲಿ ಮಾತನಾಡಿದ ಡಾ ಬಿ ಎಚ್ ಕನ್ನೂರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಅಧಿನಿಯಮ 2020 ರ ಅಧಿಸೂಚನೆ ದಿನಾಂಕ 15-02-2021 ರಂದು ಹೊರಡಿಸಲಾಗಿ ದಿನಾಂಕ 25-02-2021 ರಿಂದ ಜಾರಿಗೆ ತರಲಾಗಿದೆ.

 

Image

4. ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ

ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಗೋಹತ್ಯೆ ನಿಯಮ ಉಲ್ಲಂಘಹಿಸಿದರೆ ಸೂಕ್ತ ಕ್ರಮ:ಡಾ ಬಿ ಎಚ್ ಕನ್ನೂರ 
  • admin