ಮನುಷ್ಯನ ಸೂಕ್ಷ್ಮ ಅಂಗ ಕಣ್ಣು -40ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ-ಬಿಳ್ಳೂರು ವೈದ್ಯಾಧಿಕಾರಿ ಡಾ.ಶಿರೀಷ್ ಕಷ್ಯಪ್

ಆರೋಗ್ಯ ಕೇಂದ್ರ

Posted  44 Views updated 2 months ago

1. ಬಾಗೇಪಲ್ಲಿ

ಮನುಷ್ಯನ ಸೂಕ್ಷ್ಮ ಅಂಗ ಕಣ್ಣು -40ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ-ಬಿಳ್ಳೂರು ವೈದ್ಯಾಧಿಕಾರಿ ಡಾ.ಶಿರೀಷ್ ಕಷ್ಯಪ್


ಬಾಗೇಪಲ್ಲಿ : ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕಣ್ಣಿನ ತೊಂದ್ರೆ ಅನುಭವಿಸುತ್ತಿರುವ ರೋಗಗಳಿಗೆ ಸಂಬಂಧಿಸಿದ ಕಣ್ಣಿನ ಪೊರೆ ರೋಗ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಆಶಾಕಿರಣ ದ್ವಿತೀಯ ಹಂತದ ಬೆಂಗಳೂರು ಶಂಕರ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ ಡಾ.ಕೃಷ್ಣಪ್ಪ ರವರು ‌ ಮಾತನಾಡಿ ಕಣ್ಣಿನ ಪೊರೆ, ಕಣ್ಣಿನ ಸಮೀಪ ಮತ್ತು ದೂರದೃಷ್ಟಿಗಳಿಗೆ ತಪಾಸಣೆಯನ್ನು ನಡೆಸಿ ಅಗತ್ಯ ಇರುವವರಿಗೆ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡುವುದಲ್ಲದೆ, ಕೆಲವರಿಗೆ ಕನ್ನಡಕ ಒದಗಿಸುವುದಾಗಿ ತಿಳಿಸಿದರು. ಕಣ್ಣಿಗೆ ಸಂಬಂಧಿಸಿದ ಯಾವುದೇ ತೊಂದರೆಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಳ್ಳೂರು ವೈದ್ಯಾಧಿಕಾರಿ ಡಾ.ಶಿರೀಷ್ ಕಷ್ಯಪ್ ರವರು ಮಾತನಾಡಿ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಹಲವಾರು ಗ್ರಾಮಗಳಿದ್ದು ಸುಮಾರು ಜನರಿಗೆ ಕಣ್ಣಿನ ಸಮಸ್ಯೆಗಳಿದ್ದು ಪ್ರಾಥಮಿಕ ಹಂತದಲ್ಲಿ ಅವರಿಗೆ ಕಣ್ಣಿನ ಸಮಸ್ಯೆಗಳ ಪರೀಕ್ಷೆ ನಡೆಸಲಾಯಿತು. ಹೆಚ್ಚಿನ ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ಬೆಂಗಳೂರು ಶಂಕರ್ ಕಣ್ಣಿನ ಆಸ್ಪತ್ರೆಗೆ ದಾಖಲು ಮಾಡುವುದಾಗಿ ತಿಳಿಸಿದರು. ಇಂತಹ ಶಿಬಿರಗಳಿಂದ ಗ್ರಾಮಗಳಲ್ಲಿನ ಬಡವರು ಮಧ್ಯಮವರ್ಗದವರು ಸೇರಿದಂತೆ ಅಶಕ್ತರಿಗೆ ದೂರದ ಆಸ್ಪತ್ರೆಗಳಿಗೆ ತೆರಳಿ ದುಬಾರಿ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲದವರಿಗೆ ಈ ಶಿಬಿರಗಳು ನೆರವಾಗಲಿವೆಯೆಂದು ತಿಳಿಸಿದರು. ಕಣ್ಣಿನ ಸಮಸ್ಯೆಗಳ ಯಾವ ರೀತಿ ಉದ್ಭವಿಸುತ್ತದೆ ಅದನ್ನು ಹೇಗೆ ಬಗೆಹರಿಸಬಹುದೆಂದು ವಿವರಿಸಿದರು. ದೂರದೃಷ್ಟಿ, ಹತ್ತಿರ ದೃಷ್ಟಿ, ಪೊರೆ, ಇರಳುಗಣ್ಣು ಸೇರಿದಂತೆ ಹಲವು ಸಮಸ್ಯೆಗಳನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆ ಅಗ್ಯತವಿರುವವರಿಗೆ ಜಿಲ್ಲಾ ಕೇಂದ್ರ ಹಾಗೂ ಶಂಕರ್ ಕಣ್ಣಿನ ಆಸ್ಪತೆಯ ಸಹಯೋಗದೊಂದಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ ಆಶಾ ಕಾರ್ಯಕರ್ತೆಯರು ಆರೋಗ್ಯ ಕೇಂದ್ರ ವ್ಯಾಪ್ತಿಯ ಹಳ್ಳಿಗಳ ಜನರ ಪ್ರಾಥಮಿಕ ಹಂತದಲ್ಲಿ ಯಾರಿಗೆ ಕಣ್ಣಿನ ಸಮಸ್ಯೆಗಳಿವೆ ಎಂಬುದನ್ನು ಗುರುತಿಸಿದ್ದು ಒಟ್ಟು  860 ಮಂದಿ ಕಣ್ಣಿನ ಸಮಸ್ಯೆಯುಳ್ಳವರನ್ನು ಗುರುತಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ಆಸ್ಪತ್ರೆಯ ನೇತ್ರಾಧಿಕಾರಿ ಕೃಷ್ಣಪ್ಪ, ಶಮೀನ, ವಾಣಿ ಹಿರಿಯ ಪ್ರಾಥಮಿಕ ಸುರಕ್ಷತಾಧಿಕಾರಿ ಶ್ಯಾಮಲಾ, ರಾಜೇಶ್ವರಿ, ಕಾಯಕ ಮಿತ್ರ. ರವಣಮ್ಮ, ಆರೋಗ್ಯ ಸಂಯೋಜಕರು ರೋಜಾ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ಡಾ, ನಂದಿನಿ, ಡಾ.ಮಂಜುಳಾ, ಹಾಗೂ ಶಿವ ಪ್ರಸಾದ್ ಹಾಗೂ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರಾದ ವರಲಕ್ಷ್ಮಿ, ಲಲಿತಾ, ಅರುಣ್, ಸುಭದ್ರ, ಈಶ್ವರಮ್ಮ, ಗಂಗಾದೇವಿ, ರಾಜೇಶ್ವರಿ, ಪಾರ್ವತಿ, ಚಿನ್ನಮ್ಮ, ಲಕ್ಷಮಮ್ಮ, ಅನ್ನಪೂರ್ಣ, ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೋಂಡಿದ್ದರು.

Image

3. ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ

ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಮನುಷ್ಯನ ಸೂಕ್ಷ್ಮ ಅಂಗ ಕಣ್ಣು -40ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ-ಬಿಳ್ಳೂರು ವೈದ್ಯಾಧಿಕಾರಿ ಡಾ.ಶಿರೀಷ್ ಕಷ್ಯಪ್
  • admin