ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಆಚರಣೆ 

ಶಾಸಕ ಎಸ್ಎಂ ಸುಬ್ಬಾರೆಡ್ಡಿ

Posted  64 Views updated 1 month ago

1. ಬಾಗೇಪಲ್ಲಿ

 

ಬಾಗೇಪಲ್ಲಿ: ಮಾಡಿದ ತಪ್ಪನ್ನು ತಿದ್ದುಕೊಂಡಾಗ ಮಹಾನ್ ವ್ಯಕ್ತಿಗಳಾಗಿ ಮಾರ್ಪಡು ಆಗಬಹುದು ಎಂದು ಶಾಸಕ ಎಸ್ಎಂ ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ  ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಾಲ್ಮೀಕಿ ನಾಯಕ ನೌಕರರ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ ಮತ್ತು 16ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿಯವರು ಮಹಾ ಕಾವ್ಯವಾದ ರಾಮಾಯಣವನ್ನು ಪ್ರಪಂಚಕ್ಕೆ ನೀಡಿದವರು.ಅಂತಹ ಮಹಾನ್ ವ್ಯಕ್ತಿಯು ಒಂದು ಕಾಲದಲ್ಲಿ ದರೋಡೆ ಮಾಡುತ್ತಿದ್ದನಂತೆ,ನಂತರ ತನ್ನ ಪಾಪದ ಪಾಲನ್ನು ಕುಟುಂಬಸ್ಥರೆ ಹಂಚಿಕೊಳ್ಳುವುದಿಲ್ಲ ಎಂದಾಗ ಮನಸ್ಸು ಪರಿವರ್ತನೆಯಾಗಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮಹಾತ್ಮನಾಗಿ ಆದಿಕವಿಯಾದವರು ಎಂದು ತಿಳಿಸಿದರು.

ಹಾಗೆಯೇ ಮನುಷ್ಯನು ಕೆಟ್ಟ ತಪ್ಪು ಕೆಲಸಗಳನ್ನು ಮಾಡಿದಾಗ ಅವನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿಗಳಾಗಿ ಮಾರ್ಪಟ್ಟಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿಗೆ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಏಕೆಂದರೆ ನಮ್ಮಂತಹ ಬರನಾಡು, ಕೈಗಾರಿಕೆಗಳಿಲ್ಲದ, ಶಾಶ್ವತ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಶಿಕ್ಷಣವೊಂದೆ ಉತ್ತಮ ಸಾಧನ. ಈ ಶಿಕ್ಷಣದ ಮೂಲಕ ಅಭಿವೃದ್ಧಿಯನ್ನು ಸಾಧಿಸಬಹುದು. ಹಾಗಾಗಿ ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂದು ತಿಳಿಸಿದರು.

ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಮಾತನಾಡಿ ವಾಲ್ಮೀಕಿ ಸಮುದಾಯದ ಮಕ್ಕಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ವಿದ್ಯಾಭ್ಯಾಸ ಪಡೆಯಬೇಕು. ಸಮುದಾಯದಲ್ಲಿ ಶಿಕ್ಷಣದ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು, ಹಾಗಾಗಿ ಸಾಧಿಸುವ ಛಲವಿದ್ದರೆ ಉತ್ತಮ ಸ್ಥಾನಮಾನಗಳನ್ನು ಗಳಿಸಬಹುದು ಎಂದರು.
ಈ ಸಂಧರ್ಭದಲ್ಲಿ ಕಳೆದ ವರ್ಷ ಎಸ್ಎಸ್ಎಲ್ ಸಿ  ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.

ಇದೇ ವೇಳೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಪಲ್ಲಕ್ಕಿಗಳ ಮೆರವಣಿಗೆ, ಡೊಳ್ಳುಕುಣಿತ,ವೀರಗಾಸೆ ಸೇರಿದಂತೆ ಹಲವು ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು.

ಈ ಸಂಧರ್ಭದಲ್ಲಿ ವಾಲ್ಮೀಕಿ ನಾಯಕ ನೌಕರರ ಸಂಘದ ಪದಾಧಿಕಾರಿಗಳಾದ ಎಂ.ಸಿ ನಂಜುಂಡಪ್ಪ, ತಹಶೀಲ್ದಾರ್ ರಾದ ಪ್ರಶಾಂತ್ ಕೆ.ಪಾಟೀಲ್,ಶಿವಪ್ಪ , ನಿವೃತ್ತ ಉಪ ವಿಭಾಗಾಧಿಕಾರಿ ರಾಮಾಂಜಿನಪ್ಪ, ಜಿಲ್ಲಾ ಪಂಚಾಯತಿ‌ ಮಾಜಿ‌ ಸದಸ್ಯ ಬೂರಗಮಡುಗು ನರಸಿಂಹಪ್ಪ,ತಾಲೂಕು ಆರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ ಸೇರಿದಂತೆ ಇತರರು ಇದ್ದರು...

Image

3. ಸುದ್ದಿ ಕಿರಣ ಟಿವಿ ಬಾಳಿನ ಬೆಳಕು 

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ:9686665456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಆಚರಣೆ 
  • admin