ಶ್ರೀ ಪ್ರಸನ್ನ ಗಣಪತಿ 72ನೇ ವರ್ಷದ ಗಣೇಶೋತ್ಸವ

ಚನ್ನರಾಯಪಟ್ಟಣ:

Posted  78 Views updated 2 months ago

1. ಚನ್ನರಾಯಪಟ್ಟಣ

ಚನ್ನರಾಯಪಟ್ಟಣ: ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಚನ್ನರಾಯಪಟ್ಟಣ ಇವರ ವತಿಯಿಂದ 72ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಈ ವರ್ಷದ ವಿಶೇಷ ಅಲಂಕಾರ ಚಂದ್ರಯಾನದಲ್ಲಿ ನಮ್ಮೂರ ಗಣಪ ಲೋಕ ಸಂಚಾರ ಎಂಬ ಶೀರ್ಷಿಕೆ ಅಡಿಯಲ್ಲಿ ಡೆಕೋರೇಷನ್ ನಿರ್ಮಾಣ ಮಾಡಿರುವ ರವೀಂದ್ರ ಆರ್ಟ್ಸ್ ಅಂಡ್ ಡೆಕೋರೇಷನ್ ಮಾಲೀಕರಾದ ರವೀಂದ್ರ ಚನ್ನರಾಯಪಟ್ಟಣ ಇವರನ್ನು ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿದ ಶಾಸಕ ಸಿ ಎನ್ ಬಾಲಕೃಷ್ಣ ಮಾತನಾಡಿ ಪ್ರತಿ ವರ್ಷವೂ ಗಣಪತಿ ಪೆಂಡಾಲ್ ನಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಆವರಣದಲ್ಲಿ ವಿವಿಧ ಕಲ್ಪನೆಗಳಿಂದ ಅಲಂಕರಿಸುತ್ತಿರುವುದು ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಎನ್ನಬಹುದಾಗಿದೆ, ಮತ್ತೊಂದು ವಿಶೇಷವೆಂದರೆ ಮೂರ್ತಿಯನ್ನು ಪೂಜಿಸುವ 48 ದಿನಗಳು ಸಹ ಮಧ್ಯಾಹ್ನ ಮಹಾಮಂಗಳಾರತಿಯ ನಂತರ ಸಾವಿರಾರು ಭಕ್ತಾದಿಗಳಿಗೆ ನಡೆಯುವ ಅನ್ನದಾನ ಕೂಡ ಇಲ್ಲಿನ ಪ್ರಥಮವಾಗಿದೆ,ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ನಡೆಯುವ ಗಣೇಶ ಉತ್ಸವ ಇತ್ತೀಚಿಗೆ ವರ್ಷಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ರವೀಂದ್ರ, ಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿ ವರ್ಷವೂ ವಿವಿಧ ಕಲ್ಪನೆಗಳಿಂದ ಹೊಸ ಲೋಕವನ್ನು ಸೃಷ್ಟಿಸುವ ಅವಕಾಶ ದೊರತಿರುವುದು, ವಿಘ್ನ ನಿವಾರಕನ ಸೇವೆ ಮಾಡುವ ಸೌಭಾಗ್ಯವೆಂದು ಭಾವಿಸುತ್ತೇನೆ, ಇದು ನನ್ನಲ್ಲಿರುವ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಪ್ರೇರಣೆ ನೀಡುತ್ತಿದೆ, ನಾಡಿನ ಭಕ್ತರು ಗಣೇಶನ ದರ್ಶನ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರೆ ಅದೇ ನನಗೆ ಸಾರ್ಥಕ ಎಂದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ಮಾಜಿ ಎಂಎಲ್ಸಿ ಎಂ ಎ ಗೋಪಾಲಸ್ವಾಮಿ, ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಸಿಎನ್ ಅಶೋಕ್, ಸಿ ಕೆ ಕೃಷ್ಣ, ಮಹಾದೇವ್,ಮನೋಹರ್, ಲ.ನಾ.ಗುಪ್ತ, ಸತ್ಯನಾರಾಯಣ,ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ವಿ.ಎಸ್ ವೆಂಕಟೇಶ್, ಕಲಾವಿದ ರವೀಂದ್ರ, ಶ್ರೀ ಗಣಪತಿ ಸೇವಾ ಸಮಿತಿಯ ಸರ್ವ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.

Image

3. ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ

ಸಂಪರ್ಕಿಸಿ :96866 65456
 


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಶ್ರೀ ಪ್ರಸನ್ನ ಗಣಪತಿ 72ನೇ ವರ್ಷದ ಗಣೇಶೋತ್ಸವ
  • admin