Thursday, July 7, 2022
Home ಮಾಹಿತಿ ತಂತ್ರಜ್ಞಾನ ತುಳು ಲಿಪಿಯಲ್ಲಿ ಮಧ್ವವಿಜಯ

ತುಳು ಲಿಪಿಯಲ್ಲಿ ಮಧ್ವವಿಜಯ

ಉಡುಪಿ: ಆಚಾರ್ಯ ಮಧ್ವರ ಚರಿತ್ರೆಯನ್ನು ಅವರ ಸಮಕಾಲೀನರಾದ ನಾರಾಯಣ ಪಂಡಿತಾಚಾರ್ಯ ಕಾವ್ಯರೂಪದಲ್ಲಿ ರಚಿಸಿದ್ದು, ಅದು ಮಧ್ವವಿಜಯ ಎಂದು ಪ್ರಸಿದ್ಧವಾಗಿದೆ. ಅದರ ಪಠಣ ಹಾಗೂ ಅಧ್ಯಯನ ಸಕಲ ಇಷ್ಟಗಳನ್ನೂ ಕೊಡುವಂಥದ್ದಾಗಿದೆ.

ಮಧ್ವ ವಿಜಯದ ಸಾವಿರಕ್ಕಿಂತಲೂ ಅಧಿಕ ಶ್ಲೋಕಗಳನ್ನು ತುಳು ಲಿಪಿಯಲ್ಲಿ ಓದಲು ಅನುಕೂಲವಾಗುವ ರೀತಿಯಲ್ಲಿ ಆಂಡ್ರಾಯ್ಡ್ ಆ್ಯಪ್ ಸಿದ್ಧಪಡಿಸಲಾಗಿದ್ದು, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.

ಪಠ್ಯದ ಜೊತೆಗೆ ಧ್ವನಿಯೂ ಲಭ್ಯವಿದ್ದು ತುಳು ಲಿಪಿಯ ಅಭ್ಯಾಸಕ್ಕೆ ತುಂಬ ಅನುಕೂಲಕರವಾಗಿದೆ ಎಂದು ಆ್ಯಪ್ ಸಿದ್ಧಪಡಿಸಿದ ವಿದ್ವಾನ್ ಕಡಂದಲೆ ಗಣಪತಿ ಭಟ್ ಹೇಳಿದರು. ಪ್ಲೇಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ ಎಂದೂ ಅವರು ತಿಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!