Saturday, July 2, 2022
Home ಮಾಹಿತಿ ತಂತ್ರಜ್ಞಾನ ರಾಶಿಪೂಜೆಗೆ ಛಾಯಾಚಿತ್ರ ಸ್ಪರ್ಧೆಯ `ಸಾಂಗತ್ಯ'

ರಾಶಿಪೂಜೆಗೆ ಛಾಯಾಚಿತ್ರ ಸ್ಪರ್ಧೆಯ `ಸಾಂಗತ್ಯ’

ಉಡುಪಿ: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ನಡೆಯಲಿರುವ ರಾಶಿಪೂಜೆ ಮಹೋತ್ಸವ ಸಂದರ್ಭದಲ್ಲಿ ಛಾಯಾಚಿತ್ರ ಸ್ಪರ್ಧೆ ಸಾಂಗತ್ಯ ಶ್ರೀದೇವಳದ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಉಡುಪಿ ವಲಯ ಆಯೋಜಿಸಿದೆ.

ಫೆ. 4ರಂದು ರಾತ್ರಿ ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿಪೂಜೆ ಮಹೋತ್ಸವದ ಛಾಯಾಚಿತ್ರ ಸ್ಪರ್ಧೆಯನ್ನು ಈಶಸೇವೆಯೊಂದಿಗೆ ಕಲಾಸೇವೆ ಆಶಯದೊಂದಿಗೆ ಆಯೋಜಿಸಲಾಗಿದ್ದು, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ರಾಶಿಪೂಜಾ ಮಹೋತ್ಸವದ ಚಿತ್ತಾಕರ್ಷಕ ದೃಶ್ಯಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದು ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ತಮ್ಮದಾಗಿಸಿಕೊಳ್ಳಲು ಅಪೂರ್ವ ಅವಕಾಶ ಕಲ್ಪಿಸಲಾಗಿದೆ.

ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಅನುಕ್ರಮವಾಗಿ 3 ಸಾವಿರ, 2 ಸಾವಿರ ಮತ್ತು 1 ಸಾವಿರ ಜೊತೆಗೆ ಸ್ಮರಣಿಕೆ ಹಾಗೂ ಎರಡು ಸಮಾಧಾನಕರ ಬಹುಮಾನವಿದೆ.

ಸ್ವರ್ಧಾ ನಿಯಮ ಹಾಗೂ ನಿಬಂಧನೆ 
@ ಒಬ್ಬರು 8*10 ಗಾತ್ರದ ಗರಿಷ್ಠ ಮೂರು ಛಾಯಾಚಿತ್ರ ಕಳಿಸಬಹುದು.
@ ಛಾಯಾಚಿತ್ರದ ಹಿಂಬದಿ ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
@ ಧಾರ್ಮಿಕ ವಿಧಿ ವಿಧಾನಗಳಿಗೆ ಯಾವುದೇ ರೀತಿಯಲ್ಲಿ ಅಡಚಣೆಯಾಗದಂತೆ ಛಾಯಾಚಿತ್ರಗಳನ್ನು ತೆಗೆಯತಕ್ಕದ್ದು.
@ ಛಾಯಾಚಿತ್ರ ತೆಗೆಯುವ ಸಮಯ ಫೆ. 4 ಗುರುವಾರ ಸಂಜೆ 7 ಗಂಟೆಯಿಂದ ಫೆ. 5 ಶುಕ್ರವಾರ ಬೆಳಿಗ್ಗೆ 6 ಗಂಟೆ ವರೆಗೆ ಮಾತ್ರ ದೊಂದಿ ಬೆಳಕಿನ ಅವಕಾಶವಿದೆ.
@ ನಿರ್ಣಾಯಕರ ತೀರ್ಮಾನವೇ ಅಂತಿಮ.
@ ಎಲ್ಲರಿಗೂ ಮುಕ್ತ ಅವಕಾಶ.
@ ಛಾಯಾಚಿತ್ರ ಕಳುಹಿಸಲು ಕೊನೆಯ ದಿನಾಂಕ ಫೆ. 15, 2021.
@ ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
@ ಛಾಯಾಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ- ಶಾಡೋಸ್ ಡಿಜಿಟಲ್ ಕ್ರಿಯೇಶನ್, ಕಸ್ತೂರಿ ಬಿಲ್ಡಿಂಗ್, ಎರಡನೇ ಮಹಡಿ ಶಿರಿಬೀಡು, ಉಡುಪಿ.
@ ಬಹುಮಾನ ವಿತರಣೆ- ಫೆ. 21ರಂದು ಶ್ರೀದೇವಳದಲ್ಲಿ.
@ ಛಾಯಾಚಿತ್ರಗಳನ್ನು ಸಾಧಾರಣ ಅಂಚೆ ಅಥವಾ ತ್ವರಿತ ಅಂಚೆ ಯಾ ನೋಂದಾಯಿತ ಅಂಚೆ ಮೂಲಕವೇ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ
ಕೊಡವೂರು ಪ್ರಕಾಶ್ ಜಿ. 9880058665
ಜನಾರ್ದನ್ ಕೊಡವೂರು 9448252363
ಪ್ರಕಾಶ್ ಕೊಡಂಕೂರು 9880953649
ಸುಕೇಶ್ ಅಮೀನ್ 7204146368

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!