Saturday, July 2, 2022
Home ಮಾಹಿತಿ ತಂತ್ರಜ್ಞಾನ ನ್ಯಾಯಾಲಯ ಕಲಾಪ ಮಾಹಿತಿಗೆ ಟೆಲಿಗ್ರಾಮ್ ಚಾನೆಲ್

ನ್ಯಾಯಾಲಯ ಕಲಾಪ ಮಾಹಿತಿಗೆ ಟೆಲಿಗ್ರಾಮ್ ಚಾನೆಲ್

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************

(ಸುದ್ದಿಕಿರಣ ವರದಿ)

ಬೆಂಗಳೂರು, ಜು. 10: ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ನ್ಯಾಯಾಲಯ ಕಲಾಪಗಳ ಮಾಹಿತಿ ನೀಡಲು High court virtual case information service  ಹೆಸರಿನ ಟೆಲಿಗ್ರಾಂ ಚಾನೆಲ್ HCK Chat Bot ಅಭಿವೃದ್ಧಿಪಡಿಸಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಚಾನೆಲ್ ಉದ್ಘಾಟಿಸಿದ್ದಾರೆ.

ಈಗಾಗಲೇ 6,500 ಸದಸ್ಯರು ಹೈಕೋರ್ಟ್ ಚಾನೆಲ್ ಚಂದಾದಾರಿಕೆ ಪಡೆದುಕೊಂಡಿದ್ದಾರೆ. 5 ಸಾವಿರಕ್ಕೂ ಹೆಚ್ಚು ಸದಸ್ಯರು ಜಿಲ್ಲಾ ನ್ಯಾಯಾಲಯಗಳ ಚಾನೆಲ್ ಚಂದಾದಾರಿಕೆ ಪಡೆದುಕೊಂಡಿದ್ದಾರೆ.

ವಕೀಲರು, ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಈ ಸೇವೆಯಿಂದ ಉಪಯೋಗವಾಗಲಿದೆ. ಡಿಜಿಟಲ್ ಯುಗದಲ್ಲಿ ಎಲ್ಲಾ ವಿಚಾರಣೆಗಳನ್ನು ಜನತೆ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಇ- ನ್ಯಾಯಾಲಯದ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆ ಸ್ಥಿತಿ, ದೈನಂದಿನ ಆದೇಶಗಳನ್ನು ಈ ಚಾನೆಲ್ ನಲ್ಲಿ ನೋಡಬಹುದು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!