Sunday, July 3, 2022
Home ಮಾಹಿತಿ ತಂತ್ರಜ್ಞಾನ ವೀಡಿಯೊ ಎಡಿಟಿಂಗ್ ಕಾರ್ಯಾಗಾರ

ವೀಡಿಯೊ ಎಡಿಟಿಂಗ್ ಕಾರ್ಯಾಗಾರ

ವೀಡಿಯೊ ಎಡಿಟಿಂಗ್ ಕಾರ್ಯಾಗಾರ

(ಸುದ್ದಿಕಿರಣ ವರದಿ)

ಉಡುಪಿ: ನೂತನ ತಂತ್ರಜ್ಞಾನವನ್ನು ಕಾಲಕಾಲಕ್ಕೆ ನಾವು ಅಳವಡಿಸಿಕೊಂಡರೆ ನಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಬಹುದು ಎಂದು ಹಿರಿಯ ಸಂಪನ್ಮೂಲವ್ಯಕ್ತಿ ಎಸ್. ಜಗದೀಶನ್ ಕರೆ ನೀಡಿದರು.

ಕೊಡವೂರು ವಿಪ್ರಶ್ರೀ ಸಭಾಂಗಣದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಉಡುಪಿ ವಲಯ ಆಶ್ರಯದಲ್ಲಿ ನಡೆದ ವೀಡಿಯೊ ಎಡಿಟಿಂಗ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೃಶ್ಯ ಮಾಧ್ಯಮ ಕ್ಷೇತ್ರ ನಿಜಕ್ಕೂ ಕ್ರಿಯಾತ್ಮಕ ಮತ್ತು ವೈವಿಧ್ಯಮಯ. ಅದೆಲ್ಲವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಅಭ್ಯಾಗತರಾಗಿದ್ದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಜಿಲಾಧ್ಯಕ್ಷ ಕರಂದಾಡಿ ಶ್ರೀಧರ ಶೆಟ್ಟಿಗಾರ್, ವೃತ್ತಿ ಉಳಿದರೆ ಮಾತ್ರ ಸಂಘಟನೆ. ಆದ್ದರಿಂದ ಸದಸ್ಯರಿಗೋಸ್ಕರ ಆಯೋಜಿಸುವ ಇಂಥ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಸ್. ಜಗದೀಶನ್ ಅವರನ್ನು ಗೌರವಿಸಲಾಯಿತು.

ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಪ್ರಸಾದ್ ಜತ್ತನ್, ಪ್ರಸನ್ನ ಕೊಡವೂರು ಇದ್ದರು.

ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ಸ್ವಾಗತಿಸಿ, ವಲಯ ಕಾರ್ಯದರ್ಶಿ ಸುಕೇಶ್ ಕೆ. ಅಮೀನ್ ವಂದಿಸಿದರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!